ತಿರುಪತಿ ಲಡ್ಡುವಿನಲ್ಲಿ ಮೀನಿನ ಎಣ್ಣೆ, ಬೀಫ್, ಹಂದಿ ಕೊಬ್ಬು ಬಳಸಿರುವುದು ಲ್ಯಾಬ್ ವರದಿಯಿಂದ ಬಹಿರಂಗ

Thursday, September 19th, 2024
Tirupaty-Laddu1

ತಿರುಪತಿ : ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡುವ ಲಡ್ಡೂಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂದು ಲ್ಯಾಬ್ ವರದಿ ಗುರುವಾರ ದೃಢಪಡಿಸಿದೆ . ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಪತಿ ಲಡ್ಡೂ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ ನಂತರ ದೊಡ್ಡ ವಿವಾದವೊಂದು ಭುಗಿಲೆದ್ದಿದೆ. ಈಗ, ಪಶು ಆಹಾರ ಮತ್ತು ಹಾಲಿನ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಪ್ರಯೋಗಾಲಯದ NDDB CALF […]

ಕೆ.ಎಸ್.ಟಿ.ಡಿ.ಸಿ. ಯಿಂದ ತಿರುಪತಿ, ಕೊಲ್ಲೂರು, ಧರ್ಮಸ್ಥಳ, ಹಂಪೆ ಪ್ರತಿದಿನ ಬಸ್ ಸೇವೆ

Friday, November 13th, 2020
kstdc

ಬೆಂಗಳೂರು : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ಪ್ರವಾಸಿಗರಿಗೆ ಹಾಗೂ ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದ ಈ ಕೆಳಗಿನ ಧಾರ್ಮಿಕ ಸ್ಥಳಗಳಿಗೆ ರಾತ್ರಿ ಸಾರಿಗೆಗಳನ್ನು (Point to Point Operation) ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದ್ದು, ಸುಸ್ಸಜ್ಜಿತ ಎ.ಸಿ ಡಿಲೆಕ್ಸ್ ವಾಹನಗಳಲ್ಲಿ ಪ್ರತಿದಿನ ರಾತ್ರಿ ಬೆಂಗಳೂರಿನಿಂದ ಈ ಕೂಡಲೇ ಜಾರಿಯಲ್ಲಿ ಬರುವಂತೆ ಕಾರ್ಯಾಚರಣೆಗೆ ಕ್ರಮಕೈಗೊಳ್ಳಲಾಗಿದೆ. ಧಾರ್ಮಿಕ ಸ್ಥಳಗಳ ವಿವರ ಏಕಮುಖ ಪ್ರಯಾಣ ದರ ರೂ. ಬೆಂಗಳೂರಿನಿಂದ ಹೊರಡುವ ವೇಳೆ ಯಾತ್ರಾ ಸ್ಥಳಗಳಿಂದ ಹೊರಡುವ ವೇಳೆ 1. […]

ಕೊರೊನಾ ಭೀತಿ : ಶಬರಿಮಲೆ ಯಾತ್ರೆ ಮುಂದೂಡಲು ಸಲಹೆ

Wednesday, March 11th, 2020
shabari-male

ತಿರುವನಂತಪುರಂ : ದೇಶದಾದ್ಯಂತ ಕೊರೊನಾ ಕಳವಳ ಹೆಚ್ಚಾಗುತ್ತಿದ್ದು, ದೇವರ ನಾಡು ಕೇರಳ ಅಕ್ಷರಶಃ ನಲುಗಿದೆ. ಕೇರಳದಲ್ಲಿ ಇದುವರೆಗೆ 12 ಜನರಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢವಾಗಿದ್ದು, ಇನ್ನಷ್ಟು ಜನರಿಗೆ ಹಬ್ಬದಂತೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇರಳದಲ್ಲಿ ಹೊಸ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾರ್ಚ್ 31ರವರೆಗೆ ಚಿತ್ರ ಮಂದಿರಗಳು, ಶಾಲೆ- ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ. ಇದೇ ರೀತಿ ಧಾರ್ಮಿಕ ಉತ್ಸವಗಳು ಬೇಡ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ. ಇದೇ ವೇಳೆ ಧಾರ್ಮಿಕ ಕ್ಷೇತ್ರ […]

ಕಾರು ಪಲ್ಟಿಯಾಗಿ ಬೆಂಕಿ : ಐವರು ಸಜೀವ ದಹನ

Saturday, September 14th, 2019
chithur

ಚಿತ್ತೂರು :ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾರು ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೆಂಗಳೂರು ಮೂಲದ ಐವರು ಸಜೀವ ದಹನವಾದ ದಾರುಣ ಘಟನೆ ಶನಿವಾರ ಚಿತ್ತೂರಿನ ಪಲಮನೇರು ಮಂಡಲಂ ಬಳಿ ನಡೆದಿದೆ. ಕಾರಿನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಾಗ ಬೆಂಕಿ ಹೊತ್ತಿಕೊಂಡಿತ್ತು. ಕಾರಿನಿಂದ ಹೊರ ಬರಲಾಗದೆ ಐವರು ಸಜೀವ ದಹನವಾಗಿದ್ದರು. ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ. ಸಾವನ್ನಪ್ಪಿದವರನ್ನು ಬೆಂಗಳೂರಿನ ಜಾಹ್ನವಿ, ರಾಮ್, ಕಲಾ, ಸಾಯಿ ಆಶ್ರೀತ್ ಹಾಗೂ ಪವನ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ […]

ತಿರುಪತಿ ಮತ್ತು ಶಬರಿಮಲೆ ದೇವಸ್ಥಾನಗಳಲ್ಲಿ ತುಳುವಿನಲ್ಲಿ ಮಾಹಿತಿ

Wednesday, August 8th, 2018
ACB

ಮಂಗಳೂರು : ತುಳುವರು ಹೆಚ್ಚಾಗಿ ಭೇಟಿ ನೀಡುತ್ತಿರುವ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನ ಮತ್ತು ಕೇರಳದ ಶಬರಿ ಮಲೆ ಅಯ್ಯಪ್ಪ ದೇವಸ್ಥಾನಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ತುಳುಭಾಷೆಯಲ್ಲಿ ಸಾರ್ವಜನಿಕ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿಯವರು ಎರಡೂ ದೇವಸ್ಥಾನಗಳ ಮುಖ್ಯಸ್ಥರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ತಿರುಪತಿಯ ತಿರುಮಲ ದೇವಸ್ಥಾನಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಾವಿರಾರು ಭಕ್ತರು ವರ್ಷಂಪ್ರತಿ ಮುಡಿಪು ಅರ್ಪಿಸುವ ಉದ್ದೇಶದಿಂದ ಭೇಟಿ ನೀಡುತ್ತಾರೆ. […]

ತಿರುಪತಿಯಲ್ಲಿ ಗೌಡರ ಕುಟುಂಬ..ತಿಮ್ಮಪ್ಪನ ದರ್ಶನ ಪಡೆದ ಸಿಎಂ!

Friday, July 27th, 2018
kumarswamy

ವಿಜಯವಾಡ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಮೇತರಾಗಿ ದೇವೇಗೌಡರು ತಮ್ಮ ಕುಟುಂಬಸ್ಥರೊಂದಿಗೆ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ದೇವರ ಸನ್ನಿಧಿಗೆ ಬಂದು, ವೆಂಕಟೇಶ್ವರನ ದರ್ಶನ ಪಡೆದರು. ದೇವೇಗೌಡರ ಪತ್ನಿ ಚೆನ್ನಮ್ಮ, ಹಾಗೂ ರೇವಣ್ಣ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಗೌಡರ ಇತರ ಕುಟುಂಬ ಸದಸ್ಯರು ದೇವರ ಕೃಪೆಗೆ ಪಾತ್ರರಾದರು. ತಿಮ್ಮಪ್ಪನ ದರ್ಶನದ ಬಳಿಕ ಗೌಡರ ಕುಟುಂಬಸ್ಥರಿಗೆ ಅರ್ಚರು ಪ್ರಸಾದ, ತೀರ್ಥ ವಿತರಿಸಿದರು. ಇದಕ್ಕೂ ಮುನ್ನ […]

ದೇವೇಗೌಡರಿಗೆ 86ನೇ ಜನ್ಮದಿನದ ಸಂಭ್ರಮ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜೆಡಿಎಸ್‌‌ ವರಿಷ್ಠ

Friday, May 18th, 2018
ದೇವೇಗೌಡರಿಗೆ 86ನೇ ಜನ್ಮದಿನದ ಸಂಭ್ರಮ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜೆಡಿಎಸ್‌‌ ವರಿಷ್ಠ

ಹೈದರಾಬಾದ್: ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ, ಜೆಡಿಎಸ್‌‌ ವರಿಷ್ಠ ಹೆಚ್‌‌.ಡಿ.ದೇವೇಗೌಡ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಇಂದು 86ನೇ ವಸಂತಕ್ಕೆ ಕಾಲಿಟ್ಟಿರುವ ಗೌಡರು, ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. 1933ರ ಮೇ 18ರಂದು ಜನಿಸಿರುವ ದೇವೇಗೌಡರು, ದೇಶದ ಪ್ರಧಾನಿಯಾದ ಏಕೈಕ ಕನ್ನಡಿಗರು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ತಮ್ಮದೇ ಆದ ವರ್ಚಸ್ಸನ್ನು ಗೌಡರು ಹೊಂದಿದ್ದಾರೆ. 7 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದ ಅವರು 1994ರಿಂದ 1996ರವರೆಗೂ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಾದ ನಂತರ […]