ಮಂಗಳೂರಿನ ಡಾನ್‌ಬಾಸ್ಕೊ ಸಭಾಂಗಣದಲ್ಲಿ “ಪನೊಡಾ ಬೊಡ್ಚಾ” ತುಳು ಚಿತ್ರದ ಧ್ವನಿಸುರುಳಿ ಬಿಡುಗಡೆ

Monday, August 8th, 2016
Panoda-Bodcha

ಮಂಗಳೂರು: ಬಂಟ್ವಾಳ ತಾಲೂಕು ವಗ್ಗದ ವೃದ್ಧಿ ಸಿನಿ ಕ್ರಿಯೇಷನ್ಸ್‌ ಪ್ರಸ್ತುತಿಯ ವಿನಯ ನಾಯಕ್‌ ಹಾಗೂ ಸುನೀತಾ ವಿನಯ್‌ ನಾಯಕ್‌ ನಿರ್ಮಾಣದ ಬಹುನಿರೀಕ್ಷೆಯ “ಪನೊಡಾ ಬೊಡ್ಚಾ ತುಳು ಚಿತ್ರದ ಧ್ವನಿಸುರುಳಿ ಬಿಡುಗಡೆ ಮಂಗಳೂರಿನ ಡಾನ್‌ಬಾಸ್ಕೊ ಸಭಾಂಗಣದಲ್ಲಿ ಆ. 6ರಂದು ನಡೆಯಿತು. ಧ್ವನಿಸುರುಳಿ ಬಿಡುಗಡೆ ಮಾಡಿದ ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಟಿ.ಎ. ಶ್ರೀನಿವಾಸ್‌ ಅವರು ಮಾತನಾಡಿ, ತುಳು ಚಿತ್ರರಂಗ ನಿಧಾನವಾಗಿ ಗಟ್ಟಿಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಂತೂ ತುಳು ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಪ್ರೇಕ್ಷಕರು ತುಳು ಸಿನೆಮಾಗಳನ್ನು ಮೆಚ್ಚುತ್ತಿದ್ದಾರೆ. ಇದೆಲ್ಲವನ್ನು […]

ದಬಕ್‌ದಬಾ ಐಸಾ ತುಳು ಸಿನೆಮಾ ಪ್ರದರ್ಶನ ಸುಚಿತ್ರ ಚಿತ್ರ ಮಂದಿರದಲ್ಲಿ ಉದ್ಘಾಟನೆ

Saturday, August 6th, 2016
Dabak Daba Isa

ಮಂಗಳೂರು: ಸೀಮಿತ ಮಾರುಕಟ್ಟೆಯನ್ನು ಹೊಂದಿರುವ ತುಳು ಚಿತ್ರರಂಗದಲ್ಲಿ 511 ದಿನದ ಪ್ರದರ್ಶನದ ದಾಖಲೆಯನ್ನು ನಿರ್ಮಿಸಿರುವ ಪ್ರಕಾಶ್‌ ಪಾಂಡೇಶ್ವರ ಅವರ ಚಾಲಿಪೋಲಿಲು ಸಿನೆಮಾ ಮತ್ತು ದಬಕ್‌ದಬಾ ಐಸಾ ಸಿನೆಮಾವನ್ನು ನೋಡಿದಾಗ ನನಗೂ ತುಳು ಸಿನೆಮಾ ನಿರ್ಮಿಸುವ ಆಸಕ್ತಿ ಮೂಡುತ್ತಿದೆ. ಮುಂದಿನ ನನ್ನ ಚಿತ್ರ ತುಳು ಭಾಷೆಯಲ್ಲಿ ಮೂಡಿ ಬರಲಿದ್ದು ಪ್ರಕಾಶ್‌ ಪಾಂಡೇಶ್ವರ ಜತೆಗೂಡಿ ಆ ಸಿನೆಮಾ ನಿರ್ಮಿಸುತ್ತೇನೆ ಎಂದು ಖ್ಯಾತ ಬಹುಭಾಷಾ ನಿರ್ಮಾಪಕ ಕೆ. ಮಂಜು ತಿಳಿಸಿದರು. ಜಯಕಿರಣ ಫಿಲಮ್ಸ್‌ ಲಾಂಛನದಲ್ಲಿ ಪ್ರಕಾಶ್‌ ಪಾಂಡೇಶ್ವರ ಅವರು ಕತೆ, ಚಿತ್ರಕಥೆ […]

ಪರಭಾಷೆಯ ಚಿತ್ರಗಳ ಪೈಪೋಟಿಯಿಂದ ತುಳು ಸಿನೆಮಾಗಳು ನಡೆಯುತ್ತಿಲ್ಲ : ‘ನಮ್ಮ ಕುಡ್ಲ’ ಸಿನೆಮಾ ತಂಡ

Saturday, April 16th, 2016
Namma Kudla

ಮಂಗಳೂರು : ತುಳು ಸಿನೆಮಾಗಳು ಪರಭಾಷೆಯ ಚಿತ್ರಗಳ ಪೈಪೋಟಿಯಿಂದ ತುಳುನಾಡಲ್ಲೇ ಒಂದು ವಾರದ ಪ್ರದರ್ಶನ ಕಂಡು ಕಿತ್ತೊಗೆಯುವ ಕಾಲ ಬಂದಿದೆ. ‘ನಮ್ಮ ಕುಡ್ಲ’ ಸಿನೆಮಾ ಕಳೆದ ವಾರ ಬಿಡುಗಡೆಗೊಂಡು ಒಂದೇವಾರದಲ್ಲಿ ತಮಿಳುಭಾಷೆಯ ಚಿತ್ರಕ್ಕಾಗಿ ತೆರವುಮಾಡಬೇಕಾಯಿತು, ತುಳುನಾಡಿನ ಸಿನೆಮಾ ಮಂದಿರಗಳ ಮಾಲಿಕರು ಪರಭಾಷೆಯ ಚಿತ್ರಗಳ ಜೊತೆ ತುಳು ಭಾಷೆಯ ಚಿತ್ರಗಳಿಗೆ ಕನಿಷ್ಟ ಒಂದು ಪ್ರದರ್ಶನಕ್ಕಾದರೂ ಅವಕಾಶ ನೀಡಲಿ ಎಂದು ಚಲನಚಿತ್ರ ನಿರ್ದೇಶಕ ಮತ್ತು ನಮ್ಮ ಕುಡ್ಲ ತುಳು ಸಿನೆಮಾ ಸಂಕಲನಕಾರ ಹರೀಶ್ ನಾಯಕ್ ಹೇಳಿದರು. ನಗರದ ವುಡ್‌ಲ್ಯಾಂಡ್ಸ್ ಹೊಟೇಲಿನಲ್ಲಿ […]

ಅಂತರ್ಜಾಲದಲ್ಲಿ ಮೋಸ ಹೋಗದಿರಲು ಸೂಚನೆ

Friday, August 14th, 2015
cyber crime

ಮಂಗಳೂರು : ಸೈಬರ್ ಸೆಕ್ಯುರಿಟಿ ಮತ್ತು ಅಂತರ್ಜಾಲದಲ್ಲಿ ಮೋಸ ಹೋಗದಿರಲು ನಿರಂತರವಾಗಿ ಆರಕ್ಷಕ ಇಲಾಖೆಯಿಂದ ಹಾಗೂ ಬ್ಯಾಂಕ್‌ಗಳಿಂದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅಪರಿಚಿತರ ದೂರವಾಣಿ ಕರೆ/ಇ-ಮೇಲ್/ಮೊಬೈಲ್ ಎಸ್.ಎಂ.ಎಸ್ ಮುಖಾಂತರ ಬ್ಯಾಂಕ್ ಖಾತೆಯ ವೈಯಕ್ತಿಕ ವಿವರಗಳನ್ನು (ಖಾತೆ ವಿವರ, ಎ.ಟಿ.ಎಂ/ಡೆಬಿಟ್ ಕಾರ್ಡ್ ಸಂಖ್ಯೆ, ಗುಪ್ತ ಸಂಕೇತ(Password/pin), ಸಿ.ವಿ.ಸಿ ಸಂಖ್ಯೆಗಳನ್ನು ಕೇಳಿದಾಗ ಸಾರ್ವಜನಿಕರು ಅವರಿಗೆ ನೀಡಿ ಅಂತಹ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಅಪರಾಧಿಗಳು ಉಪಯೋಗಿಸಿಕೊಂಡು ಬ್ಯಾಂಕ್ ಖಾತೆಯಿಂದ ಹಣ ಪಡೆಯುವುದು, ಆನ್-ಲೈನ್ ಶಾಪಿಂಗ್ ಮಾಡುವುದು ಇತ್ತೀಚಿನ […]