ಉಡುಪಿ ಆಶ್ರಮದ 12 ಮಂದಿ ಪುಟಾಣಿ ಮಕ್ಕಳಿಗೆ ಹಾಗೂ ಒಂಭತ್ತು ಸಿಬ್ಬಂದಿ ಗೆ ಕೊರೋನ ಸೋಂಕು
Thursday, May 27th, 2021ಉಡುಪಿ : ಮಕ್ಕಳ ದತ್ತು ಸ್ವೀಕಾರ ಕೇಂದ್ರ ‘ಕೃಷ್ಣಾನುಗ್ರಹ’ದ 14 ವರ್ಷದೊಳಗಿನ 12 ಮಂದಿ ಪುಟಾಣಿ ಮಕ್ಕಳು ಕೊರೋನ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಇಲ್ಲಿನ ಸಂತೆಕಟ್ಟೆ ಬಳಿ ಇರುವ ಈ ಕೇಂದ್ರದಲ್ಲಿ ಆಶ್ರಮದ ಆಯಾ ಸೇರಿದಂತೆ ಒಂಭತ್ತು ಸಿಬ್ಬಂದಿ ಸಹ ಸೋಂಕಿಗೆ ಒಳಗಾಗಿದ್ದಾರೆ. ಪಾಸಿಟಿವ್ ಬಂದಿರುವ ಎಲ್ಲಾ 21 ಮಕ್ಕಳನ್ನು ಕೃಷ್ಣಾನುಗ್ರಹ ಆಶ್ರಮದಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿದಿನ ಎರಡು ಬಾರಿ ವೈದ್ಯರು ಬಂದು ಮಕ್ಕಳ ತಪಾಸಣೆ ನಡೆಸುತ್ತಿದ್ದಾರೆ. ಯಾರಲ್ಲೂ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದು ಅವರು ಮಾಹಿತಿ […]