ಕೊರೊನಾದಿಂದ ಮೃತ ವ್ಯಕ್ತಿಯನ್ನು ದಫನ ಮಾಡುವುದರಿಂದ ಸೋಂಕು ಹರಡಲ್ಲ : ಜಿಲ್ಲಾಧಿಕಾರಿ

Friday, April 24th, 2020
DC Sindhu

ಮಂಗಳೂರು: ಸೋಂಕಿತ ವ್ಯಕ್ತಿಯ ಮೃತದೇಹವನ್ನು ಹೂಳುವುದು ಅಥವಾ ದಹನ ಮಾಡುವ ಮೂಲಕ ಅಂತ್ಯಕ್ರಿಯೆ ಜರುಗಿಸಬಹುದು. ಹೀಗೆ ದಹಿಸಿದ ಅಥವಾ ದಫನ ಮಾಡಿದ ದೇಹದ ಬೂದಿಯಿಂದ ಮತ್ತೊಬ್ಬರಿಗೆ ಯಾವುದೇ ವೈರಾಣು ಹರಡುವುದಿಲ್ಲ. ಈ ಬೂದಿಯನ್ನು ಸಂಗ್ರಹಿಸಿ ಇತರ ಧಾರ್ಮಿಕ ಆಚರಣೆಗಳನ್ನೂ ನಡೆಸಬಹುದು ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಿವಾಸಿ 78 ವರ್ಷದ ಮಹಿಳೆ ಕೋವಿಡ್-19ನಿಂದ ಮೃತಪಟ್ಟ ಬಳಿಕ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕೆಲವು ಮಾಹಿತಿಗನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಕೊರೊನಾ ಸೋಂಕಿತರ ಮೃತದೇಹದಿಂದ […]