ಅವ್ಯವಹಾರ ಸಾಬೀತು-ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಅಮಾನತು
Saturday, August 6th, 2016ಕುಂಬಳೆ: ಕರ್ತವ್ಯ ವೇಳೆ ಅವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ನ ಕಾರ್ಯದರ್ಶಿಯಾಗಿದ್ದ ಪುತ್ತಿಗೆ ನಿವಾಸಿ ಜಗದೀಶ್ ರೈ. ಪಿ.ಎ ರನ್ನು ಸೇವೆಯಿಂದ ವಜಾ ಮಾಡ ಲಾಗಿದೆಯೆಂದು ಬ್ಯಾಂಕ್‌ನ ಅಧ್ಯಕ್ಷ ಕೆ. ಶಂಕರ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಗದೀಶ್ ರೈ ಅವ್ಯವಹಾರ ನಡೆಸಿ ಬ್ಯಾಂಕ್ ಹಾಗೂ ಗ್ರಾಹಕರಿಗೆ ವಂಚಿಸಿದ ಆರೋಪದಂತೆ ಅವರನ್ನು 2016 ಜನವರಿ 1ರಿಂದ 6 ತಿಂಗಳಿಗೆ ಅಮಾನತುಮಾಡಲಾಗಿತ್ತು. ಅವರ ಮೇಲಿನ ಆರೋಪಗಳು ಸಾಬೀತು ಗೊಂಡ ಹಿನ್ನೆಲೆಯಲ್ಲಿ ಅವರನ್ನು ಇದೀಗ 2016 ಜುಲೈ 22ರಿಂದ ಸೇವೆಯಿಂದ ವಜಾಮಾಡ ಲಾಗಿದೆ. […]