ಕತ್ತು ಸೀಳಿದ ಗಾಳಿಪಟದ ದಾರ: ವೈದ್ಯೆ ದುರ್ಮರಣ
Tuesday, October 9th, 2018ಪುಣೆ: ಗಾಳಿ ಪಟದ ಚೈನಾ ಮಾಂಜಾ ದಾರ ಕತ್ತು ಸೀಳಿದ ಪರಿಣಾಮ ಫ್ಲೈಓವರ್ನಲ್ಲಿ ಸ್ಕೂಟರ್ ಸವಾರೆಯಾಗಿ ತೆರಳುತ್ತಿದ್ದ ಯುವ ವೈದ್ಯೆ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಪುಣೆಯ ಬೋಸಾರಿ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ. 26 ರ ಹರೆಯದ ಆಯುರ್ವೇದ ವೈದ್ಯೆ ಕೃಪಾಲಿ ನಿಕ್ಕಂ ಅವರು ಮೃತ ದುರ್ದೈವಿ. ಹಾರಾಡುತ್ತಿದ್ದ ಗಾಳಿಪಟದ ಮಾಂಜಾ ದಾರ ಕತ್ತನ್ನು ಸೀಳಿದ ಪರಿಣಾಮ ಏಕಾಏಕಿ ಸ್ಕೂಟರ್ನಿಂದ ಕುಸಿದು ಬಿದ್ದಿದ್ದಾರೆ. ಕತ್ತಿನ ಭಾಗದಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ಆಕೆ ಮಾತನಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ […]