ಮನೆಮಂದಿಯನ್ನು ಕಟ್ಟಿಹಾಕಿ ಮುಸುಕುಧಾರಿಗಳ ತಂಡದಿಂದ ಚಿನ್ನಾಭರಣ ಮತ್ತು13 ಲಕ್ಷ ನಗದು ದರೋಡೆ

Friday, June 26th, 2020
Achuta Bhat

ಬೆಳ್ತಂಗಡಿ  : ರಾತ್ರಿ ಹೊತ್ತು ನಾಯಿ ಬೊಗಳಿದ ಶಬ್ದ ಕೇಳಿ ಬಾಗಿಲು ತೆಗೆದಾಗ ನಾಲ್ವರು ಮುಸುಕುಧಾರಿಗಳ ತಂಡವೊಂದು ಮನೆಯೊಳಗೆ ನುಗ್ಗಿ ಮನೆಮಂದಿಯನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿ ನಡೆದಿದೆ. ಧರ್ಮಸ್ಥಳ ಗ್ರಾಮದ ನೀರಚಿಲುವೆ ಬಳಿಯ ಅಚ್ಯುತ ಭಟ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಗುರುವಾರ  ಮಧ್ಯರಾತ್ರಿ ಸುಮಾರು 2.30 ರ ಸುಮಾರಿಗೆ ಮನೆಗೆ ನುಗ್ಗಿದ ಕಳ್ಳರು ಮನೆ ಮಂದಿಯನ್ನು‌ ಕಟ್ಟಿ ಹಾಕಿ ಸುಮಾರು 13 ಲಕ್ಷ ನಗದು ಸಹಿತ 40 ಪವನ್ […]

ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ನಿಂತಿದ್ದ ವ್ಯಕ್ತಿಯ ಬಳಿಯಿಂದ ನಗದು ಕಳವು

Thursday, February 2nd, 2017
Shreenivasulu

ಮಂಗಳೂರು: ಧರ್ಮಸ್ಥಳ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯ ಬಳಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸರು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀನಿವಾಸುಲು(25) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ಡಿ. 25 ರಂದು ಬೆಂಗಳೂರಿನ ಲೋಕೇಶ್ ಎಂಬವರು ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಅವರ ಪ್ಯಾಂಟ್ ಕಿಸೆಯಿಂದ ಎಟಿಎಂ ಕಾರ್ಡ್ , 8700 ರೂ. ನಗದು ಕಳವು ಮಾಡಿದ್ದ. ಇನ್ನು ಕಳವು ಮಾಡಿದ್ದ ಎಟಿಎಂನಿಂದ ಮಂಗಳೂರಿನಲ್ಲಿ ಚಿನ್ನಾಭರಣವನ್ನು ಖರೀದಿಸಿದ್ದ. ಇದರ ಆಧಾರದಲ್ಲಿ ಬೆಳ್ತಂಗಡಿ […]

ಪಿಕಪ್‌-ಬೈಕ್‌ ಡಿಕ್ಕಿ: ಅಯ್ಯಪ್ಪಸ್ವಾಮಿ ಮಾಲಾಧಾರಿ ಸಾವು

Friday, January 6th, 2017
vehicle collision

ಬೆಳ್ತಂಗಡಿ: ಪಿಕಪ್‌ ವಾಹನಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಉಪ್ಪಾರಪಳಿಕೆಯಲ್ಲಿ ಸಂಭವಿಸಿದೆ. ವಿಟ್ಲ ಮೂಲದ ಫೋಟೋಗ್ರಾಫರ್‌ ಧನಂಜಯ (35) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ. ಘಟನಾಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.