ನರಿಂಗಾನ ತೃತೀಯ ವರ್ಷದ ಲವಕುಶ ಜೋಡು ಕರೆ ಕಂಬಳಕ್ಕೆ ಕುದಿ ಮುಹೂರ್ತ

Monday, July 8th, 2024
Lava-kusha-kambala

ಮಂಗಳೂರು : ನರಿಂಗಾನ ಗ್ರಾಮ ಪಂಚಾಯತಿನ ಬೋಳದ ಪದವು ನಲ್ಲಿ ಜನವರಿ ತಿಂಗಳಲ್ಲಿ ನಡೆಯಲಿರುವ ತೃತೀಯ ವರ್ಷದ ಕಂಬಳದ ಪೂರ್ವಭಾವಿ ಯಾಗಿ ಕುದಿ ಮಹೂರ್ತವು ಜುಲೈ 7 ರ ಭಾನುವಾರ ನಡೆಯಿತು. ಲವಕುಶ ಕಂಬಳ ಸಮಿತಿಯ ಪದಾಧಿಕಾರಿ ಮೋರ್ಲಾ ಚಂದ್ರಹಾಸ ಶೆಟ್ಟಿಯವರು ವರ್ಕಾಡಿ ದೇವಂದಪಡ್ಪು ಶ್ರೀ ಮಹಾ ವಿಷ್ಣು ಕ್ಷೇತ್ರದ ತೀರ್ಥ ಪ್ರಸಾದವನ್ನು ಜೋಡುಕರೆಗೆ ಪ್ರೋಕ್ಷಣೆ ಮಾಡುವ ಮೂಲಕ ಸಾಂಕೇತಿಕವಾಗಿ ಕುದಿ ಕಂಬಳಕ್ಕೆ ಮುಹೂರ್ತವಿಟ್ಟರು. ಲವಕುಶ ಜೋಡು ಕರೆ ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಮಿತ್ತಕೋಡಿ […]

ನರಿಂಗಾನ ಗ್ರಾಮದ ಮರೀಕಳದ ಕಸಾಯಿಖಾನೆಗೆ ಅಕ್ರಮ ದನ ಸಾಗಾಟ, ಒಬ್ಬ ಆರೋಪಿಯನ್ನು ಬಿಟ್ಟ ಪೊಲೀಸರು – ಬಜರಂಗದಳ ಖಂಡನೆ

Friday, September 17th, 2021
Marikkala

ಮಂಗಳೂರು :  ಮುಡಿಪು ಸಮೀಪದ ನರಿಂಗಾನ ಗ್ರಾಮದ ಮೊಂಟೆಪದವು ಸರಕಾರೀ ಶಾಲೆ ಸಮೀಪ ದ ಮರೀಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ದನಗಳನ್ನು ಹಾಗು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು ಕಾಣದ ಕೈಗಳ ಪ್ರಭಾವದಿಂದ ಒಬ್ಬ ಆರೋಪಿಯನ್ನು ಕೇಸು ದಾಖಲಿಸದೆ ಬಿಟ್ಟಿರುವ ಪೊಲೀಸ್ ಇಲಾಖೆಯ ಈ ಕೃತ್ಯ ಖಂಡನೀಯ ಎಂದು ಬಜರಂಗದಳ  ಹೇಳಿದೆ. ನರಿಂಗಾನ ಗ್ರಾಮದ ಮರೀಕಳದಲ್ಲಿ ನಿರಂತರವಾಗಿ ದನಗಳನ್ನು ವಧೆಗೋಸ್ಕರ ಪಿಕ್ ಅಪ್ ವಾಹನ ಸಂಖ್ಯೆ KA 18 8539 ದಲ್ಲಿ ಕಾನೂನು ಬಾಹಿರವಾಗಿ ಸಾಗಿಸುತ್ತಿರುವ ಮಾಹಿತಿ ಪ್ರಕಾರ ಈ ವಾಹನದಲ್ಲಿ […]

ಮಾಜಿ ಪಂಚಾಯತ್ ಸದಸ್ಯ, ಪ್ರಗತಿಪರ ಕೃಷಿಕ ಮೋರ್ಲ ವಿಶ್ವನಾಥ ಶೆಟ್ಟಿ ನಿಧನ

Tuesday, December 29th, 2020
Morla Vishwanatha Shetty

ಮಂಗಳೂರು : ಮಾಜಿ ನರಿಂಗಾನ ಗ್ರಾಮ ಪಂಚಾಯತ್ ಸದಸ್ಯ, ಪ್ರಗತಿಪರ ಕೃಷಿಕ ಮೋರ್ಲ ವಿಶ್ವನಾಥ ಶೆಟ್ಟಿ ಅಲ್ಪಕಾಲದ ಅಸೌಖ್ಯದ ನಂತರ ಮಂಗಳವಾರ ಬೆಳಿಗ್ಗೆ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಬೆನ್ನು ಮೂಳೆಯ ಸಮಸ್ಯೆಯಿಂದ  (ನರ ಸಂಬಂದಿ ಕಾಯಿಲೆ) ಕಳೆದ ಎರಡು ತಿಂಗಳುಗಳಿಂದ  ಚಿಕಿತ್ಸೆ ಪಡೆಯುತ್ತಿದ್ದರು. ವಿಟ್ಲ ಸಮೀಪದ ಕಲಿಂಜೆ ಕಂಪದ ಬೈಲು ಬಂಟಪ್ಪ ಶೆಟ್ಟಿ ಮತ್ತು ಭಾಗೀರಥಿ ದಂಪತಿಗಳ ಎಂಟು ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿದ ವಿಶ್ವನಾಥ ಶೆಟ್ಟಿ ನರಿಂಗಾನ ಗ್ರಾಮದ ಮೋರ್ಲ ಎಂಬಲ್ಲಿ ತನ್ನ ಅಜ್ಜನ […]

2 ಕೆ.ಜಿ. ಗಾಂಜಾದೊಂದಿಗೆ ಮಾರಾಟಗಾರನ ಬಂಧನ

Monday, February 12th, 2018
Ganja

ಮಂಗಳೂರು : ನೆತ್ತಿಲಪದವು ಎಂಬಲ್ಲಿ ಕೊಣಾಜೆ ಠಾಣೆ ಪೊಲೀಸರು ಹಾಗೂ ರೌಡಿ ನಿಗ್ರಹ ದಳದವರು ಗಾಂಜಾ ಮಾರಾಟಗಾರನೊಬ್ಬನನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ನೆತ್ತಿಲಪದವು ನಿವಾಸಿ ಅಬ್ದುಲ್ ನಿಸಾರ್ ಬಂಧಿತ ಆರೋಪಿ. ಈತ ಕೋಲಾರದಿಂದ ಗಾಂಜಾವನ್ನು ಖರೀದಿಸಿ ಮಂಜೇಶ್ವರ ಉಪ್ಪಳ ಕಡೆಗಳಲ್ಲಿ ಮಾರಾಟ ಮಾಡಲು ಕೊಂಡು ಹೋಗುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ನೆತ್ತಿಲಪದವು ಎಂಬಲ್ಲಿಂದ ಬಂಧಿಸಿದ ಪೊಲೀಸರು ಆತನಿಂದ 2 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.