ಗೋಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಮರಣಾಂತ ಉಪವಾಸ
Monday, April 2nd, 2018ಮಂಗಳೂರು: ತಾಲೂಕಿನ ಮುಡಿಪು ವಲಯದ ಕೈರಂಗಳಪುಣ್ಯಕೋಟಿ ನಗರದ ಅಮೃತಧಾರಾ ಶಾಲೆಯಿಂದ ಇತ್ತೀಚೆಗೆ ನಡೆದ ದನ ದರೋಡೆ ಪ್ರಕರಣ ಖಂಡಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಮರಣಾತ ಉಪವಾಸ ಸತ್ಯಾಗ್ರಹ ಆರಂಭವಾಗಿದೆ. ಅಮೃತಧಾರಾ ಗೋಶಾಲೆ ಸಮಿತಿ ಅಧ್ಯಕ್ಷ ಟಿ.ಜಿ. ರಾಜಾರಾಮ ಭಟ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಪರಿಸರದ ಗೋಪ್ರೇಮಿಗಳು ಬೆಂಬಲ ಸೂಚಿಸಿ ಧರಣಿ ಕುಳಿತಿದ್ದಾರೆ. ಗೋಕಳ್ಳರನ್ನು ಬಂಧಿಸಿ, ಅವರು ತಪ್ಪೊಪ್ಪಿಕೊಳ್ಳುವ ತನಕ ಸತ್ಯಾಗ್ರಹದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಧರಣಿನಿರತರು ಘೋಷಿಸಿದ್ದಾರೆ. ಈ ಮೂಲಕ ಗೋಕಳ್ಳರಿಗೆ ಎಚ್ಚರಿಕೆ […]