ಕಡಬ : ಕಾರು-ದ್ವಿಚಕ್ರ ವಾಹನ ಢಿಕ್ಕಿ : ಸವಾರ ಗಂಭೀರ

Wednesday, October 30th, 2019
kadaba

ಕಡಬ : ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ಕಡಬದ ಕಾಲೇಜು ಕ್ರಾಸ್ ಬಳಿ ಬುಧವಾರ ಸಂಜೆ ನಡೆದಿದೆ. ಗಾಯಾಳು ಸವಾರನನ್ನು ಕಡಬ ಸಮೀಪದ ಪಣೆಮಜಲು ನಿವಾಸಿ ನಾರಾಯಣ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ತನ್ನ ದ್ವಿಚಕ್ರ ವಾಹನದಲ್ಲಿ ಸರ್ಕಾರಿ ಕಾಲೇಜು ಕಡೆಯಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ವೇಳೆ ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಮಾರುತಿ ಎ-ಸ್ಟಾರ್ ಕಾರು ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ […]

20ನೇ ಕನ್ನಡ ಸಾಹಿತ್ಯ ಸಮ್ಮೇಳನ: ವೀಳ್ಯ ಸ್ವೀಕಾರ

Wednesday, December 12th, 2018
u-t-khader

ಬಂಟ್ವಾಳ: ಮಾಣಿಯ ಪ್ರಮುಖರು 20ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಬಗ್ಗೆ ಫರಂಗಿಪೇಟೆಯಲ್ಲಿ ನಡೆದ 19ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರಿಂದ ವೀಳ್ಯ ಸ್ವೀಕರಿಸಿದರು. ಮಾಣಿ ಬಾಲವಿಕಾಸ ವಿದ್ಯಾ ಕೇಂದ್ರ ಸಂಚಾಲಕ ಜಡ್ತಿಲ ಪ್ರಹ್ಲಾದ ಶೆಟ್ಟಿ ಕೊಂಬಿಲ ನಾರಾಯಣ ಶೆಟ್ಟಿ ಅನಂತಾಡಿ, ಬಿ. ಜಗನ್ನಾಥ ಚೌಟ ಮಾಣಿ, ಬಾಲಕೃಷ್ಣ ಆಳ್ವ ಕೊಡಾಜೆ, ಮಾಧವ ಕಡೇಶಿವಾಲಯ, ಪೂವಪ್ಪ ನೇರಳಕಟ್ಟೆ, ಬಾಲವಿಕಾಸ ಮಾಣಿಯ ಆಡಳಿತ ನಿರ್ದೇಶಕ ಶ್ರೀಧರ್‌ ಮೊದಲಾದವರು ಜೊತೆಗಿದ್ದರು. ಸಮ್ಮೇಳಾನಾಧ್ಯಕ್ಷ […]

ನಿಮ್ಮನ್ನು ನೋಡುತ್ತಿದೆ ಕ್ಯಾಮರಾ… ಎಲ್ಲೆಂದರಲ್ಲಿ ಕಸ ಹಾಕುವ ಮುನ್ನ ಹುಷಾರ್‌!

Thursday, January 18th, 2018
Mangaluru

ಮಂಗಳೂರು: ಎಲ್ಲೆಂದರಲ್ಲಿ ಕಸ ಹಾಕಬೇಡಿ ಎಂದು ಸ್ಥಳೀಯಾಡಳಿತ ಅದೆಷ್ಟೇ ಹೇಳಿದರೂ ರಸ್ತೆಯಲ್ಲೇ ಕಸ ಎಸೆದು ಹೋಗುವವರಿಗೇನೂ ಕಮ್ಮಿಯಿಲ್ಲ. ಹೀಗೆ ಹೆದ್ದಾರಿ ಪಕ್ಕ ಕಸ ಎಸೆದು ಮಾಯವಾಗುವ `ಬುದ್ಧಿವಂತರನ್ನು’ ಪ್ರಜ್ಞಾವಂತರನ್ನಾಗಿಸಲು ಮಾಣಿ ಗ್ರಾಪಂ ಸಿಸಿ ಕ್ಯಾಮರಾ ಅಳವಡಿಸಿ ಕಾಯುವ ವಿನೂತನ ಯೋಜನೆ ರೂಪಿಸಿ ಪಣ ತೊಟ್ಟಿದೆ. ಸದಾ ಒಂದಿಲ್ಲೊಂದು ದಿನ ಕಾಣಿಸುವ ಕಸದ ರಾಶಿಗೆ ಮುಕ್ತಿ ದೊರಕಿಸಲು ಮೊದಲ ಹೆಜ್ಜೆಯಾಗಿ ಸಿಸಿ ಕ್ಯಾಮರಾ ಅಳವಡಿಸುವ ನಿರ್ಧಾರಕ್ಕೆ ಗ್ರಾಮ ಪಂಚಾಯತ್ ಬಂದಿದೆ. ಇದು ಸ್ವಚ್ಛ ಭಾರತದೆಡೆಗೆ ಮೊದಲ ಹೆಜ್ಜೆ ಎಂದು […]