ಪ್ರೇಮ ವೈಫಲ್ಯ ನದಿಗೆ ಹಾರಿ ಕೊನೆ ಕ್ಷಣದಲ್ಲಿ ಸಾಯುವ ನಿರ್ಧಾರ ಕೈ ಬಿಟ್ಟ ಪ್ರೇಮಿ
Thursday, March 7th, 2019ಮಂಗಳೂರು : ಪ್ರೇಮ ವೈಫಲ್ಯದಿಂದ ಹತಾಶನಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ. ಆದರೆ ಆತನಿಗೆ ಕೊನೆ ಕ್ಷಣದಲ್ಲಿ ಈಜಾಡಿ ದಡ ಸೇರಿದ ಪ್ರಸಂಗ ಮಂಗಳೂರಿನಲ್ಲಿ ನಿನ್ನೆ ಬುಧವಾರ ಸಂಜೆ ನಡೆದಿದೆ. ನದಿಗೆ ಹಾರಿದ ಯುವಕನನ್ನು ನೌಫಲ್ ಎಂದು ಗುರುತಿಸಲಾಗಿದೆ. ಪ್ರೇಮ ವೈಫಲ್ಯದಿಂದ ಮನನೊಂದ ಮಂಜೇಶ್ವರದ ತೂಮಿನಾಡು ನಿವಾಸಿ ನೌಫಲ್ ನಿನ್ನೆ ಸಂಜೆ ನೇತ್ರಾವತಿ ನದಿಗೆ ಹಾರಿದ್ದ. ಸೇತುವೆ ಮೇಲಿಂದ ನೇತ್ರಾವತಿ ನದಿಗೆ ಹಾರಿದ್ದ ನೌಫಲ್ ನೀರಿನಿಂದ ಮೇಲಕ್ಕೆ ಬಂದ ತಕ್ಷಣ ಈಜಿ ಸೇತುವೆಯ ಪಿಲ್ಲರ್ ಬಳಿಗೆ […]