ಮಂಡ್ಯದ ಸಮಸ್ಯೆಗಳ ಬಗ್ಗೆ ದೆಹಲಿಯಲ್ಲಿ ಹೋರಾಡಲು ಸಿದ್ದನಿದ್ದೇನೆ : ಸುಮಲತಾ ಅಂಬರೀಶ್
Thursday, April 4th, 2019ಬೆಂಗಳೂರು: ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರು ಬೆಂಗಳೂರು ಪ್ರಸ್ಕ್ಲಬ್ನಲ್ಲಿ ಸುದೀರ್ಘ ಸುದ್ದಿಗೋಷ್ಠಿಯಲ್ಲಿ ನಡೆಸಿ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ಜನರ ಅಭಿಪ್ರಾಯದಂತೆ ರಾಜಕೀಯ ಪ್ರವೇಶಿಸಿದ್ದೇನೆ . ರಾಜಕೀಯ ಪ್ರವೇಶ ಮಾಡಿ ತಾಳ್ಮೆ ಕಲಿತಿಲ್ಲ. ತಾಳ್ಮೆ ಅನ್ನುವುದು ನನ್ನ ಹುಟ್ಟುಗುಣ, ಅಂಬರೀಶ್ ಅವರನ್ನು ಮದುವೆಯಾಗಿ 27 ವರ್ಷ ಸಂಸಾರ ನಡೆಸಿದ್ದೇನೆ ಇದಕ್ಕೆ ನನ್ನ ತಾಳ್ಮೆಯೆ ಕಾರಣ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು. ಮೂವರು ಸುಮಲತಾರಿಂದ ಜೆಡಿಎಸ್ಗೆ ಮತಗಳು ಬೀಳುವುದಿಲ್ಲ. ಇನ್ನೊಂದು ಸುಮಲತಾಗೆ […]