ಪಿಂಚಣಿ ಮತ್ತು ಪಡಿತರವನ್ನು ನೀಡುವುದಿಲ್ಲ ಎಂದು ನಿರ್ಬಂಧ ಹೇರದೆ ಲಸಿಕೆ ಹಾಕಲು ಜಿಲ್ಲಾಧಿಕಾರಿಗಳಿಗೆ ಸೂಚನೆ

Thursday, September 2nd, 2021
Vaccination

ಬೆಂಗಳೂರು : ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಕೈಗೊಂಡು ಲಸಿಕೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶಿಸಿದ್ದಾರೆ. ಕೋವಿಡ್ ಲಸಿಕೆ ಪಡೆಯದ ಸಾರ್ವಜನಿಕರಿಗೆ ಪಿಂಚಣಿ ಮತ್ತು ಪಡಿತರವನ್ನು ನೀಡುವುದಿಲ್ಲವೆಂಬ ವರದಿಗಳು ಪತ್ರಿಕೆಗಳಲ್ಲಿ ವರದಿಯಾಗಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಪಿಂಚಣಿ ಹಾಗೂ ಪಡಿತರವನ್ನು ಯಾವುದೇ ಕಾರ್ಯಕ್ರಮ/ ಯೋಜನೆಗಳಿಗೆ ಜೋಡಿಸಿರುವುದಿಲ್ಲ. ಲಸಿಕಾ ಕಾರ್ಯವನ್ನು ತಪ್ಪಾಗಿ ಜೋಡಿಸಿದ್ದಲ್ಲಿ ಕೂಡಲೇ ಕೈಬಿಡಲು ಅವರು ಇಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

ಪಡಿತರದಲ್ಲಿ ಕುಚ್ಚಲಕ್ಕಿ ನೀಡಲು ಶಾಸಕ‌ ಯು.ಟಿ. ಖಾದರ್ ಸೂಚನೆ

Friday, April 3rd, 2020
utkader

ಮಂಗಳೂರು  : ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡುದಾರರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಚ್ಚಲಕ್ಕಿ ನೀಡಲು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ. ಕರೋನಾ ನಿರ್ಬಂಧ ಹಿನ್ನೆಲೆಯಲ್ಲಿ ಪಡಿತರ ಅಕ್ಕಿಗೆ ವ್ಯಾಪಕ ಬೇಡಿಕೆ ಇದ್ದು, ಜಿಲ್ಲೆಯ ಜನತೆ ಕುಚ್ಚಲಕ್ಕಿ ಅನ್ನ ತಿನ್ನುವುದರಿಂದ ಅದನ್ನೇ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಬೇಕು. ಈ ಬಗ್ಗೆ ಮುಖ್ಯ ಮಂತ್ರಿ ಪ್ರಧಾನ ಕಾರ್ಯದರ್ಶಿ ಹಾಗೂ ಆಹಾರ ಇಲಾಖೆ‌ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ತಾನು ಸಮಾಲೋಚಿಸಿದ್ದು, ಜಿಲ್ಲೆಯಲ್ಲಿ ಕುಚ್ಚಲಕ್ಕಿ ಪಡಿತರದಲ್ಲಿ […]

ಪಡಿತರದಲ್ಲಿ ಕುಚ್ಚಲಕ್ಕಿ ಒದಗಿಸುವಂತೆ ಆಹಾರ ಆಯೋಗದ ಅಧ್ಯಕ್ಷರಿಂದ ಸರಕಾರಕ್ಕೆ ಶಿಫಾರಸು

Saturday, February 2nd, 2019
krishna-moorti

ಮಂಗಳೂರು : ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಒದಗಿಸುವಂತೆ ಆಯೋಗವು ಸರಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ|ಎನ್.ಕೃಷ್ಣಮೂರ್ತಿ ಹೇಳಿದರು. ಅವರಿಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆಯಲ್ಲಿ ಮಾತನಾಡುತ್ತಿದ್ದರು. ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯ ಜಿಲ್ಲೆಗಳಲ್ಲಿ ಪಡಿತರ ಯುನಿಟ್‍ವೊಂದರ 5 ಕಿಲೋ ಅಕ್ಕಿ ಮತ್ತು ಎರಡು ಕಿಲೋ […]