ಮೆಸ್ಕಾಂ ಉದ್ಯೋಗಿಯಿಂದ ಪಿಯುಸಿ ಬಾಲಕಿಗೆ ಲವ್ಜೆಹಾದ್ ಯತ್ನ, ಆರೋಪಿಯ ಬಂಧನ
Tuesday, December 22nd, 2020ಸವಣೂರು : ಸವಣೂರಿನ ಪೆರಿಯಡ್ಕ ಸಮೀಪದ ನಿವಾಸಿಯಾಗಿರುವ ಪಿಯುಸಿ ಓದುತ್ತಿರುವ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ ಆರೋಪದ ಮೇರೆಗೆ ಸವಣೂರಿನ ಮೆಸ್ಕಾಂ ಸಿಬ್ಬಂದಿಯೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಮೆಸ್ಕಾಂ ಉದ್ಯೋಗಿಯಾಗಿರುವ ಸೊಯೂಬ್ ಕೊತ್ವಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮೂಲಕ ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ, ಅಲ್ಲದೇ ಅಸಭ್ಯವಾಗಿ ಸಂದೇಶ ರವಾನಿಸುತ್ತಿದ್ದ, ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಎಂದು ಬಾಲಕಿ ಆರೋಪಿಸಿದ್ದಾಳೆ. ಈ ವಿಚಾರ ಸವಣೂರಿನ ಹಿಂದೂ […]