ಪಿಲಿಕುಳ ಮೃಗಾಲಯದ ವಿಕ್ರಮ್ ಹುಲಿ ಸಾವು

Tuesday, October 27th, 2020
Vikram

ಮಂಗಳೂರು: ಪಿಲಿಕುಳ ಮೃಗಾಲಯದ ಹಳೇ ತಲೆಮಾರಿನ ಹುಲಿ 21 ವರ್ಷ ಪ್ರಾಯದ ಹುಲಿ ವಿಕ್ರಮ್ ನಿನ್ನೆ ಸಾವನ್ನಪ್ಪಿದೆ. ವಿಕ್ರಮ್ ಹುಲಿಯನ್ನು 4 ವರ್ಷದ ಮರಿಯಾಗಿದ್ದ ಸಂದರ್ಭದಲ್ಲಿ 2003ರಲ್ಲಿ ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪ ಸಫಾರಿಯಿಂದ ತರಲಾಗಿತ್ತು. ಈ ಹುಲಿಗೆ 10 ಮರಿಗಳಿವೆ. ಕದಂಬ, ಕೃಷ್ಣ, ವಿನಯ, ಒಲಿವರ್, ಅಕ್ಷಯ, ಮಂಜು, ಅಮರ್, ಅಕ್ಬರ್, ಆಂಟನಿ ಮತ್ತು ನಿಷ ಎಂಬ ಮರಿಗಳಿವೆ‌. ಅವುಗಳನ್ನು ದೇಶದ ವಿವಿಧ ಮೃಗಾಲಯಗಳಾದ ರಾಜಸ್ಥಾನ, ಗುಜರಾತ್, ತೆಲಂಗಾಣ, ಆಂಧ್ರ ಪ್ರದೇಶ, ಮೈಸೂರು ಮೃಗಾಲಯಗಳಿಗೆ ಕಳುಹಿಸಿಕೊಡಲಾಗಿತ್ತು. ಸಂದರ್ಶಕರಿಗೆ ಸುಲಭವಾಗಿ […]

ಆಗಸ್ಟ್ 16ರಿಂದ ಪಿಲಿಕುಳ ಮೃಗಾಲಯ ಸಾರ್ವಜನಿಕ ವೀಕ್ಷಣೆಗೆ ಮುಕ್ತ

Friday, August 14th, 2020
pilikula

ಮಂಗಳೂರು : ಆಗಸ್ಟ್  16ರಿಂದ ಪಿಲಿಕುಳ ಮೃಗಾಲಯ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದ್ದು, ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಡಾ. ಜಯಪ್ರಕಾಶ ಭಂಡಾರಿ ತಿಳಿಸಿದ್ದಾರೆ. ಮೃಗಾಲಯಕ್ಕೆ ಬರುವ ಸಂದರ್ಭ ಕೊರೊನಾ ಬಗ್ಗೆ ಜಿಲ್ಲಾಡಳಿತ ನೀಡುತ್ತಿರುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ. ಪ್ರತೀ ಸೋಮವಾರ ಮೃಗಾಲಯದ ನಿರ್ವಹಣೆ ಕಾರ್ಯ ನಡೆಯಬೇಕಾಗಿರುವುದರಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿಲ್ಲ. ಮೃಗಾಲಯಕ್ಕೆ ಬರುವ ವೇಳೆ ಸಂದರ್ಶಕರು ಮಾಸ್ಕ್‌ ಅನ್ನು ಕಡ್ಡಾಯವಾಗಿ ಸರಿಯಾಗಿ […]

ಪಿಲಿಕುಳ ಮೃಗಾಲಯಕ್ಕೆ ಅಪರೂಪದ ಧೋಲ್ ಆಗಮನ

Monday, December 17th, 2018
dhole

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಎರಡು ಗಂಡು ಮತ್ತು ಎರಡು ಹೆಣ್ಣು ಧೋಲ್, ಐದು ಪೈಂಟೆಡ್ ಕೊಕ್ಕರೆ, ದೊಡ್ಡ ಜಾತಿಯ ಐದು ಅಲೆಕ್ಸ್‍ಜಾಡ್ರಿಯನ್ ಗಿಳಿಗಳನ್ನು ತರಿಸಲಾಗಿದೆ. ಪ್ರಾಣಿಗಳ ವಿನಿಮಯ ಯೋಜನೆಯನ್ವಯ ಪಿಲಿಕುಳದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಎರಡು ಗಂಡು ಹುಲಿಗಳು, ನಲ್ಕು ಕಾಡು ಕೋಳಿಗಳು ಮತ್ತು ಒಂದು ಮೊಸಳೆಯನ್ನು ವಿಶಾಖಪಟ್ಟಣಂಗೆ ನೀಡಲಾಗಿದೆ. ಧೋಲ್‍ಲನ್ನು ಕಾಡುನಾಯಿ ಯಾ ಚೆನ್ನೆ ನಾಯಿ ಎಂದು ಕರೆಯುತ್ತಾರೆ. ಇವುಗಳು ಹಿಂಡುಗಳಲ್ಲಿ ವಾಸಿಸುತ್ತವೆ. ಹಿಂದೆ ಅರಣ್ಯಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿತು. ಇವು ಈಗ […]

ಪಿಲಿಕುಳ ಮೃಗಾಲಯಕ್ಕೆ ಆಧುನಿಕ ಬ್ಯಾಟರಿ ಚಾಲಿತ ವಾಹನಗಳ ಆಗಮನ

Saturday, December 30th, 2017
pilikula

ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು ಸುಮಾರು ಎರಡು ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆಸಕ್ತ ವೀಕ್ಷಕರಿಗೆ ಆರಾಮವಾಗಿ ಕುಳಿತುಕೊಂಡು ಪ್ರಯಾಣಿಸಲು ನಾಲ್ಕು ಗಾಲಿಯ ಆಕರ್ಷಕ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನಗಳು ಜೈವಿಕ ಉದ್ಯಾನವನಕ್ಕೆ ಆಗಮಿಸಿವೆ. ಈ ಹಿಂದೆ ಇದ್ದ ಮೂರು ಗಾಲಿಗಳ ಹಳೇ ವಾಹನಗಳ ಬದಲಿಗೆ ಹೊಸ ವಿನ್ಯಾಸದ ಆರಾಮವಾಗಿ ಸಂಚರಿಸುವ ವಾಹನಗಳನ್ನು ತರಲಾಗಿದೆ. ಈಗಾಗಲೇ 4 ರಿಂದ 10 ಆಸನಗಳ ನಾಲ್ಕು ವಾಹನಗಳು ಆಗಮಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಇನ್ನಷ್ಟು […]