Blog Archive

ಉಪ್ಪಿನಕಾಯಿ ಬಾಟಲಿಯೊಳಗೆ ಕಬ್ಬಿಣದ ಸ್ಪಾನರ್ ಗ್ರಾಹಕನಿಂದ ದೂರು

Friday, January 18th, 2013
Spanner in pickle bottle

ಮಂಗಳೂರು : ಪುತ್ತೂರು ತಾಲೂಕಿನ ಸತೀಶ್ ರೈ ನಡುಬೈಲು ಎಂಬುವವರು ಅಂಗಡಿಯೊಂದರಿಂದ ಖರೀದಿಸಿದ ಉಪ್ಪಿನಕಾಯಿ ಬಾಟಲಿಯೊಳಗೆ ಕಬ್ಬಿಣದ ಸ್ಪಾನರ್ ಲಭಿಸಿದ್ದು, ಈ ಕುರಿತು ಉಪ್ಪಿನ ಕಾಯಿ ಸಂಸ್ಥೆಯ ಮಾಲಕರನ್ನು ಸಂಪ ರ್ಕಿಸಿದಾಗ ಅವರು ಹಾರಿಕೆಯ ಉತ್ತರ ನೀಡಿರುವುದಾಗಿ ಆರೋಪಿಸಿದ್ದಾರೆ. ಸತೀಶ್ ರೈ ನಡುಬೈಲು ಎರಡು ದಿನಗಳ ಹಿಂದೆ ಪುತ್ತೂ ರಿನ ಅಂಗಡಿಯೊಂದರಿಂದ ಯಜ ಮಾನ ಉಪ್ಪಿನಕಾಯಿ ಉತ್ಪನ್ನ ಖರೀದಿಸಿದ್ದು. ಅರ್ಧ ಕೆ.ಜಿ.ಯ ಬಾಟಲಿಯ ಮುಚ್ಚಳವನ್ನು ತೆರೆದು ಒಳ ನೋಡಿದಾಗ ಉಪ್ಪಿನಕಾಯಿಯ ಜೊತೆಗೆ ಕಬ್ಬಿಣದ ಸ್ಪಾನರ್ ಸಿಕ್ಕಿದ್ದು, ಈ […]

ಪುತ್ತೂರು ಜೋಡಿ ಆತ್ಮಹತ್ಯೆ ಪ್ರೀತಿಗೆ ಯುವಕನ ತಾಯಿಯೇ ವಿಲನ್ ಆದಳು !

Saturday, December 29th, 2012
Chetan Navya

ಮಂಗಳೂರು : ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ತಾಜಾ ಘಟನೆ ಪುತ್ತೂರು ಪೇಟೆಯ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕರ್ಮಲ ಎಂಬಲ್ಲಿಂದ ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದ ಅವರ ವಿವಾಹಕ್ಕೆ ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿರುವುದೇ ಆತ್ಮಹತ್ಯೆಗೆ ಕಾರಣ ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಿ ಬರುತ್ತಿದೆ. ಚಿಕ್ಕಮುಡ್ನೂರು ಗ್ರಾಮದ ಕರ್ಮಲ ನಿವಾಸಿ ರುಕ್ಮಯ್ಯ ಗೌಡ ಅವರ ಪುತ್ರ ಚೇತನ್ (26) ಮತ್ತು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ವಿಶ್ವನಾಥ ಗೌಡ ಅವರ ಪುತ್ರಿ ನವ್ಯ […]

ಎಂಟು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿರುವ ಆನಂದ, ಸಹಾಯಕ್ಕೆ ಕೋರಿಕೆ

Monday, December 10th, 2012
Ananda Kundaaje

ಮಂಗಳೂರು :ಕಳೆದ ಎಂಟು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿರುವ ಆತನದ್ದು ಅಸಹನೀಯ ಬದುಕು. ಆ ಯುವಕನ ಬದುಕು ಕಮರಿ ಹೋಗಿದೆ. ಜೀವನ್ಮರಣ ಹೋರಾಟದಲ್ಲಿ ಗೆಲುವು ಅಷ್ಟರಲ್ಲೇ ಇದೆ. ಜರ್ಜರಿತಗೊಂಡ ಈತನ ಕುಟುಂಬ ಬಡತನದ ಬೇಗೆಯಲ್ಲಿ ಬಳಲಿಬೆಂಡಾಗಿದೆ. ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಕುಂಡಾಜೆ ನಿವಾಸಿ ಆನಂದ ಎಂಬ ಯುವಕನ ಚಿಂತಾಜನಕ ಸ್ಥಿತಿ, ಹಾಗೂ ಆತನ ಕುಟುಂಬದ ಭವಣೆಯ ಒಂದು ಚಿತ್ರಣ. ಎಂಟು ವರ್ಷಗಳ ಹಿಂದೆ ಮರದಿಂದ ಬಿದ್ದು ಬೆನ್ನುಹುರಿ ನೋವಿನಿಂದ ಬಳಲುತ್ತಿರಿರುವ ಆನಂದನ ಮನೆಯಲ್ಲಿ ಆನಂದವೇ ಇಲ್ಲ, […]

ಕಕ್ಕೂರು ಮರ್ಡರ್ ಪ್ರಕರಣ: ಅಷ್ಟಕ್ಕೂ ಕೊಲೆಗಾರ ಯಾರು ?

Saturday, November 24th, 2012
Kakur Murder case

ಮಂಗಳೂರು :ಇದು ತೀರಾ ಸಾಮಾನ್ಯವಾದ ಪ್ರಕರಣವಲ್ಲ. ಒಂದೇ ಮನೆಯಲ್ಲಿ ನಾಲ್ಕು ಮೃತದೇಹಗಳು ಬಿದ್ದುಕೊಂಡಿರುವುದು ಜತೆಗೆ ಮನೆ ಮಾಲೀಕ ತಲೆ ತಪ್ಪಿಸಿಕೊಂಡಿರುವುದು ಎಲ್ಲವೂ ಇಡೀ ಜಿಲ್ಲೆಯ ಜನರಲ್ಲಿ ಸಾವಿರಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ಇದರ ಜತೆಗೆ ಪೊಲೀಸ್ ಇಲಾಖೆನೂ ಕೂಡ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿತ್ತು. ಈಗ ಮನೆ ಮಾಲೀಕರ ತಲೆ ಬರುಡೆ ಸೇರಿದಂತೆ ಅವರ ಆತ್ಮಹತ್ಯೆಗಳ ಕುರುಹುಗಳು ಪತ್ತೆಯಾಗುವ ಮೂಲಕ ಎದ್ದು ನಿಂತು ಕೊಂಡು ಪ್ರತಿಯೊಬ್ಬರು ಕೇಳುವ ಪ್ರಶ್ನೆ ಒಂದೇ ಅಷ್ಟಕ್ಕೂ ಕೊಲೆಗಾರ ಯಾರು ಸ್ವಾಮಿ..? ಆದರೆ […]

ವಳಾಲು ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥ.

Thursday, September 23rd, 2010
ವಳಾಲು ಶಾಲೆ

ಪುತ್ತೂರು: ಮಧ್ಯಾಹ್ನ ಬಿಸಿಯೂಟ ಮಾಡಿದ 45 ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾದ ಘಟನೆ ಪುತ್ತೂರು ತಾಲೂಕಿನ ವಳಾಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ. ಅಸ್ವಸ್ಥ ಮಕ್ಕಳನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿದೆ. ಕೆಲವು ಮಕ್ಕಳನ್ನು ಖಾಸಗಿ ಆಸ್ವತ್ರೆಗೆ ಸೇರಿಸಲಾಗಿದೆ. ಸಹಾಯಕ ಕಮಿಷನರ್ ಡಾ| ಹರೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಮತ್ತು ಶಾಲೆಯಲ್ಲಿ ತಯಾರಿಸಲಾದ ಬಿಸಿಯೂಟದ ಸ್ಯಾಂಪಲ್ನ್ನು ಆರೋಗ್ಯ ಇಲಾಖೆಯ ಮೂಲಕ ಪ್ರಯೋಗಾಲಯಕ್ಕೆ […]