ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆಯ ವಿರುದ್ಧ ಪ್ರತಿಭಟನಾ ಪ್ರದರ್ಶನ

Saturday, June 27th, 2020
cpim

ಮಂಗಳೂರು : ಪೆಟ್ರೋಲ್ ಡೀಸೆಲ್ ದರವನ್ನು ವಿಪರೀತವಾಗಿ ಏರಿಸಿ, ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಕೇಂದ್ರ ದ ನರೇಂದ್ರ ಮೋದಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ CPIM ಮಂಗಳೂರು ನಗರ ದಕ್ಷಿಣ ಸಮಿತಿಯ ನೇತ್ರತ್ವದಲ್ಲಿ ಕ್ಲಾಕ್ ಟವರ್ ಬಳಿಯಲ್ಲಿ ಶನಿವಾರ  ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿದ CPIM ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಮಾತನಾಡುತ್ತಾ, *ಜನರಲ್ಲಿದ್ದ ಅತ್ರಪ್ತಿಯ ಲಾಭವನ್ನು ಪಡೆದು ಹಾಗೂ ಅವರಲ್ಲಿನ ಭಾವನೆಗಳನ್ನು ಕೆರಳಿಸಿ, ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ನೇತ್ರತ್ವದ ಸರಕಾರವು ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವುದು […]

ಪೆಟ್ರೋಲ್ ಬೆಲೆ ೧ ರೂ. ಅಗ್ಗ, ಡೀಸೆಲ್ ೫೦ ಪೈಸೆ ಹೆಚ್ಚಳ

Thursday, March 14th, 2013
Petrol and deasel price

ನವ ದೆಹಲಿ : ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಯುತ್ತಿರುವ ಪರಿಣಾಮ ಪೆಟ್ರೋಲ್ ಬೆಲೆಯೂ ಒಂದು ರೂಪಾಯಿಯಷ್ಟು ಇಳಿಯಲಿದೆ. ಪೆಟ್ರೋಲ್ ಬೆಲೆ ಒಂದು ರೂಪಾಯಿಯಷ್ಟು  ಇಳಿಕೆಯಾಗಲಿದ್ದರೆ, ಜನವರಿಯಲ್ಲಿ ಪ್ರತಿ ತಿಂಗಳು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದರಿಂದ, ಡೀಸೆಲ್ ಬೆಲೆ ೪೦ ರಿಂದ ೫೦ ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬೆಲೆಯು  ಮಾರ್ಚ್ ೧೫ ಶುಕ್ರವಾರ ಅಥವಾ ಮಾರ್ಚ್ ೧೬ ಶನಿವಾರದಿಂದು ಪ್ರಕಟಗೊಳ್ಳುವ  ಸಾಧ್ಯತೆಯಿದೆ.