ಕೊರೋನ ಲಾಕ್ ಡೌನ್ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಪದವಿ ಕಾಲೇಜುಗಳು ಆರಂಭ

Tuesday, November 17th, 2020
Degree college

ಮಂಗಳೂರು : ಕೊರೋನ ಲಾಕ್ ಡೌನ್ ಬಳಿಕ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಪದವಿ ಕಾಲೇಜುಗಳಲ್ಲಿ ತರಗತಿಗಳು ಇಂದಿನಿಂದ ಆರಂಭಗೊಂಡಿವೆ. ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ತರಗತಿ ಆರಂಭಿಸಲಾಗಿದೆ. ಕೋವಿಡ್-19 ನೆಗೆಟಿವ್ ವರದಿ ಇದ್ದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಅದೇರೀತಿ ಕಾಲೇಜಿಗೆ ಆಗಮಿಸುವುದಕ್ಕೆ ಸಮ್ಮತಿ ಇರುವುದಾಗಿ ಪೋಷಕರಿಂದ ಒಪ್ಪಿಗೆ ಪತ್ರ ತಂದಿರುವ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ನೀಡಲಾಗಿದೆ. ತರಗತಿ ಪ್ರವೇಶಿಸುವ ಮೊದಲು […]

ವಿಶೇಷ ಸಾಧನೆ ಮಾಡಿದ ಮಂಗಳೂರಿನವರಾದ ರೆನಿಟ, ಶಮಿತ ಹಾಗೂ ಕಡಬದವರಾದ ಫೌಝಿಯ, ಸಮೀರ. ಕೆ. ಅವರಿಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ

Wednesday, December 14th, 2016
Mangaluru Press Club Award

ಮಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಅವಕಾಶ ವಂಚಿತರಿಗೆ ಶೈಕ್ಷಣಿಕ ಸೇವೆ ನೀಡುವ ಮೂಲಕ ವಿಶೇಷ ಸಾಧನೆ ಮಾಡಿದ ಮಂಗಳೂರು ನಿವಾಸಿಗಳಾದ ರೆನಿಟ ಮತ್ತು ಶಮಿತ ಹಾಗೂ ಕಡಬ ನಿವಾಸಿಗಳಾದ ಫೌಝಿಯ ಮತ್ತು ಸಮೀರಾ. ಕೆ. ಎಂಬ ನಾಲ್ವರು ಯುವತಿಯರಿಗೆ ಈ ಬಾರಿಯ (2016-17ನೇ ಸಾಲಿನ) ’ಪ್ರೆಸ್‌ಕ್ಲಬ್ ಪ್ರಶಸ್ತಿ’ಯನ್ನು ನೀಡಲು ಆಯ್ಕೆಮಾಡಲಾಗಿದೆ. ಪ್ರೊ.ಬಿ.ಎ.ವಿವೇಕ ರೈ ಅಧ್ಯಕ್ಷತೆಯ, ಸದಾನಂದ ಸುವರ್ಣ ಮತ್ತು ಪ್ರೊ.ರೀಟಾ ನರೋನ್ಹ ಅವರನ್ನು ಒಳಗೊಂಡ ನಿರ್ಣಾಯಕ ಮಂಡಳಿ ಈ ನಾಲ್ವರು ಯುವತಿಯರನ್ನು ‘ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ’ಗೆ ಆಯ್ಕೆ […]