ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ರಾಡ್ ನಿಂದ ಹಲ್ಲೆ, ಪತ್ನಿ ಸಾವು, ಪತಿ ಗಂಭೀರ
Sunday, October 18th, 2020ಕೊಪ್ಪಳ: ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮೇಲೆ ಅಪರಿಚಿತರು ದಾಳಿ ನಡೆಸಿ ಪತ್ನಿ ಸಾವನ್ನಪ್ಪಿದ್ದು, ಗಂಭೀರಾವಾಗಿ ಗಾಯಗೊಂಡಿರುವ ಪತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮೇಲೆ ಈ ರೀತಿ ಭಯಾನಕ ದಾಳಿ ನಡೆದಿದೆ. ಘಟನೆಯಲ್ಲಿ ತ್ರಿವೇಣಿ (35) ಸ್ಥಳದಲ್ಲಿ ಮೃತರಾಗಿದ್ದು, ಪತಿ ವಿನೋದ್ (30) ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿವಾಸಿಯಾಗಿದ್ದ ದಂಪತಿ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಬ್ಯಾಂಕ್ ಉದ್ಯೋಗಿಗಳಾಗಿದ್ದು, ಕಾರಟಗಿಯಲ್ಲಿ ವಾಸವಾಗಿದ್ದರು. […]