ದೇಶದ 80 ಕೋಟಿ ಜನರಿಗೆ ಫ್ರೀ ರೇಶನ್: ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ

Monday, June 7th, 2021
narendra-modi

ನವದೆಹಲಿ: ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯಾರೂ ಹಸಿವಿನಿಂದ ಮಲಗಬಾರದು. ಹೀಗಾಗಿ, ದೇಶದ 80 ಕೋಟಿ ಜನರಿಗೆ ಬರುವ ದೀಪಾವಳಿವರೆಗೆ ಆಹಾರ ಧಾನ್ಯ ವಿತರಿಸಲಾಗುವುದು. ಇದರ ಕಟ್ಟುನಿಟ್ಟಿನ ಅನುಷ್ಟಾನಕ್ಕಾಗಿ ‘ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯನ್ನು ಮತ್ತೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ‌. ದೇಶಾದ್ಯಂತ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು‌. ಲಸಿಕೆ ವಿತರಣಾ ವ್ಯವಸ್ಥೆಯನ್ನು ಕೇಂದ್ರೀಕೃತಗೊಳಿಸಲಾಗುವುದು. ಮೊದಲ ಅಲೆಯಲ್ಲಿ ನಮಗೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಎರಡನೇ ಅಲೆಯಲ್ಲಿ ನಮ್ಮೊಂದಿಗೆ ಜನರ ಸಹಕಾರ ಸಿಕ್ಕಿದೆ‌ ಎಂದಿದ್ದಾರೆ.