ಕಾವೇರಿ ನೀರು : ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ, 144 ಸೆಕ್ಷನ್​ ಜಾರಿ

Friday, September 29th, 2023
cauvery-protest

ಬೆಂಗಳೂರು: ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳ ಜನರ ಜೀವನಾಡಿ ಕಾವೇರಿ ನೀರನ್ನು ರಾಜ್ಯದಲ್ಲಿ ತೀವ್ರ ಬರಗಾಲದ ಮಧ್ಯೆ ತಮಿಳು ನಾಡಿಗೆ ಹರಿಸುವುದನ್ನು ವಿರೋಧಿಸಿ ಇಂದು ಶುಕ್ರವಾರ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರುನಾಡು ಬಂದ್ ಗೆ ಬೆಳಗ್ಗೆಯಿಂದಲೇ ಪ್ರತಿಕ್ರಿಯೆ ಕಂಡುಬಂತು. ರಾಜಧಾನಿ ಬೆಂಗಳೂರಲ್ಲಿ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಈಗಾಗಲೆ ಪೊಲೀಸರು ನಗರದ ಸೂಕ್ಷ್ಮ ಮತ್ತು ಪ್ರಮುಖ ಪ್ರದೇಶಗಳಲ್ಲಿ ಕಾವಲಿಗೆ ಇಳಿದಿದ್ದಾರೆ. ಬೆಂಗಳೂರಿನ ವಾಣಿಜ್ಯ, ವ್ಯಾಪಾರ ಚಟುವಟಿಕೆಗಳ ಕೇಂದ್ರ ಭಾಗವಾಗಿರುವ ಕೆಆರ್ ಮಾರುಕಟ್ಟೆಯಲ್ಲಿ ವಿವಿಧ ಸಂಘಟನೆಗಳು ವಿಭಿನ್ನ […]

ಕೊರೊನಾ ಹೆಚ್ಚಳ – ಗಡಿಭಾಗಕ್ಕೆ ಹೊಂದಿಕೊಂಡಿರುವ ಎಲ್ಲಾ ಮದ್ಯದಂಗಡಿಗಳನ್ನು ಬಂದ್

Tuesday, August 3rd, 2021
wine Shop

ಮಂಗಳೂರು : ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ, ಕಟ್ಟುನಿಟ್ಟಿನ ನಿಬರ್ಂಧಗಳ ನಂತರವು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಆಗಿರುವ ಹಿನ್ನಲೆಯಲ್ಲಿ ಅದರ ಕಣ್ಗಾವಲು, ನಿಯಂತ್ರಣ ಮತ್ತು ಜಾಗೃತಿಗೆ ಸಂಬಂಧಿಸಿದಂತೆ ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಶೇಷ ಸರ್ವೇಕ್ಷಣೆಯನ್ನು ನಿರ್ದೇಶಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಸಾರ್ವಜನಿಕರು ಮದ್ಯ ಸೇವನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳ ಮದ್ಯದಂಗಡಿಗಳನ್ನೇ […]

ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿಗೂ ಬಂತು ಕೊರೋನಾ, ಸೋಮವಾರ 13 ಅಂಚೆ ಕಚೇರಿಗಳು ಬಂದ್

Saturday, July 18th, 2020
headpost-office

ಮಂಗಳೂರು :  ಪ್ರಧಾನ ಅಂಚೆ ಇಲಾಖೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಮಂಗಳೂರಿನ 13 ಅಂಚೆ ಕಚೇರಿಗಳು ಸೋಮವಾರದಂದು ಸಾರ್ವಜನಿಕ ಸೇವೆ ಲಭ್ಯವಿರುವುದಿಲ್ಲ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್ ತಿಳಿಸಿದ್ದಾರೆ. ಮಂಗಳೂರಿನ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟಾ, ಅಶೋಕನಗರ, ಗಾಂಧಿನಗರ, ಬೋಳೂರು, ಕೂಳೂರು, ಕೊಂಚಾಡಿ, ಕಾವೂರು, ಬಿಜೈ, ಕೊಡಿಯಾಲ್ ಬೈಲ್, ಫಳ್ನೀರ್, ಫಿಶರಿಸ್ ಕಾಲೇಜ್, ಮಂಗಳೂರು ಕಲೆಕ್ಟರೇಟ್, ಎಸ್ ಓ ಅಂಚೆ ಕಚೇರಿಗಳು ಸೋಮವಾರದಂದು ಸಾರ್ವಜನಿಕ […]

ಬಂಟ್ವಾಳ : ಕಂಚಿನಡ್ಕಪದವುನಲ್ಲಿ ತ್ಯಾಜ್ಯ ವಿಲೇವಾರಿ ವಿವಾದ; ಸಜೀಪನಡು ಗ್ರಾಮ ಸಂಪೂರ್ಣ ಬಂದ್

Thursday, March 19th, 2020
sanjipa

ಬಂಟ್ವಾಳ : ಸಜೀಪನಡು ಗ್ರಾಮದ ಕಂಚಿನಡ್ಕಪದವುನಲ್ಲಿ ಮಾ. 18ರಂದು ಬಂಟ್ವಾಳ ಪುರಸಭೆಯ ಕಸ ವಿಲೇವಾರಿ ನಡೆಸುವ ವೇಳೆ ನಡೆದ ಬೆಳವಣಿಗೆಯನ್ನು ಖಂಡಿಸಿ ಗುರುವಾರ ಸಜೀಪ ಸಂಪೂರ್ಣ ಬಂದ್ ನಡೆಸಲಾಗುತ್ತಿದೆ. ಕಸ ವಿಲೇವಾರಿ ನಡೆಸುವುದನ್ನು ಪ್ರತಿಭಟಿಸಿದ ಗ್ರಾಮಸ್ಥರ ಮೇಲೆ ಪೊಲೀಸರ ದೌರ್ಜನ್ಯ ಪ್ರದರ್ಶಿಸಿದ್ದಾರೆ ಹಾಗೂ ಕಸ ವಿಲೇವಾರಿಯ ವಿಚಾರದಲ್ಲಿ ಪುರಸಭೆಯವರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಸಜೀಪನಡು ಗ್ರಾಮಸ್ಥರು ಸಜೀಪ ಬಂದ್ ಗೆ ಕರೆ ನೀಡಿದ್ದರು. ಕಂಚಿನಡ್ಕಪದವು ಘಟಕದಲ್ಲಿ ತ್ಯಾಜ್ಯ ವಿಲೇವಾರಿ ನಡೆಸುವ ಕುರಿತು ಕೆಲವು ದಿನಗಳಿಂದ ಸ್ಥಳೀಯರು […]