ಹಜ್‌ ಭವನ ಉತ್ತಮ ಕಾರ್ಯಕ್ರಮಗಳಿಗೆ ಸದ್ಬಳಕೆಯಾಗಬೇಕು: ರೋಷನ್‌ ಬೇಗ್‌

Thursday, August 4th, 2016
Roshan-Beg

ಮಂಗಳೂರು: ಮಂಗಳೂರಿನಲ್ಲಿ ಬಹೂಪಯೋಗಿ ಕೇಂದ್ರವಾಗಿ ಹಜ್‌ ಭವನ ನಿರ್ಮಾಣ ಮಾಡಲು ರೂಪುರೇಖೆ ಸಿದ್ಧಪಡಿಸಿ ಅದಕ್ಕೆ ಬೇಕಾದ ಎಲ್ಲ ನೆರವನ್ನು ಸರಕಾರದಿಂದ ನೀಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ಹಜ್‌ ಸಚಿವ ಆರ್‌. ರೋಷನ್‌ ಬೇಗ್‌ ಹೇಳಿದರು. ಬಜಪೆ ಹಳೆ ವಿಮಾನ ನಿಲ್ದಾಣದಲ್ಲಿ 2016-17ನೇ ಸಾಲಿನ ಹಜ್‌ ಯಾತ್ರೆಯ ವಿಮಾನ ಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಬುಧವಾರ ಮಾತನಾಡಿದರು. ಹಜ್‌ ಭವನ ಕೇವಲ ನೆಪ ಮಾತ್ರಕ್ಕೆ ನಿರ್ಮಾಣವಾಗುವಂತಾಗಬಾರದು. ಇತರ ಉತ್ತಮ ಕಾರ್ಯಕ್ರಮಗಳಿಗೂ ಅದು ಸದ್ಬಳಕೆಯಾಗುವಂತಿರಬೇಕು. ಈ ನಿಟ್ಟಿನಲ್ಲಿ ಬಹೂಪಯೋಗಿ ಹಜ್‌ […]

ಸರ್ಕಾರಿ ಕಾಲೇಜಿಗೆ ಯಕ್ಷಗಾನ, ಸಂಶೋಧನಾ ಕೇಂದ್ರ-ಯಕ್ಷಸಂಶೋಧನಾಸಕ್ತರಿಗೆ ವರದಾನ

Sunday, February 28th, 2016
yakshagana research center

ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿಗೆ ಯಕ್ಷಗಾನ ಸಂಶೋಧನಾ ಕೇಂದ್ರ ಮಂಜೂರಾಗುವ ಮೂಲಕ ಯಕ್ಷಗಾನ ಸಂಶೋಧನಾಸಕ್ತ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯೊಂದು ಈಡೇರುವ ಸನ್ನಹದಲ್ಲಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ಡಾ. ಪ್ರಭಾಕರನ್ ಆಯೋಗ ಶಿಫಾರಸಿನ ಮೇರೆಗೆ ಕಾಸರಗೋಡು ಸರ್ಕಾರಿ ಕಾಲೇಜಿಗೆ ಕೇಂದ್ರ ಲಭ್ಯವಾಗಿದೆ. ಪ್ರಥಮ ಹಂತದಲ್ಲಿ ಯಕ್ಷಗಾನ ಮ್ಯೂಸಿಯಂ ಹಾಗೂ ಯಕ್ಷಗಾನ ಗ್ರಂಥಾಲಯ ಆರಂಭಿಸಲಾಗುವುದು. ಪ್ರಸ್ತುತ ಕಾಲೇಜಿನ ಕನ್ನಡ ವಿಭಾಗದ ಸಮೀಪವಿರುವ ಕೊಠಡಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಶ್ರೇಷ್ಠ ಕಲೆಯಾಗಿರುವ ಯಕ್ಷಗಾನಕ್ಕೆ ಅಕಾಡಮಿಕ್ ಆದ ಅಧ್ಯಯನ ಕೇಂದ್ರದ ಕೊರತೆಯನ್ನು ಈ […]