ಬಾಂಬ್ ತಯಾರಿಕೆಗೆ ಆರ್ಡಿಎಕ್ಸ್ ನೀಡಿದವರ ಸಮಗ್ರ ತನಿಖೆಯಾಗಬೇಕು : ಮಿಥುನ್ ರೈ
Saturday, January 25th, 2020ಮಂಗಳೂರು : ಮಂಗಳೂರು ಕೋಮು ದೌರ್ಜನ್ಯದ ಪ್ರಯೋಗಾಲಯವಾಗುತ್ತಿದ್ದು, ಬಾಂಬ್ ತಯಾರಿಕೆಗೆ ಬೇಕಾದ ಆರ್ಡಿಎಕ್ಸ್ ಎಲ್ಲಿಂದ ಬಂತು ಹಾಗೂ ಅದನ್ನು ನೀಡಿದರು ಯಾರು ? ಹಾಗೂ ಪ್ರಕರಣ ಹಿಂದೆ ಯಾರು ಶಾಮೀಲಾಗಿದ್ದಾರೆ ಎನ್ನುವುದರ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪ್ರಶ್ನಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಿಥುನ್ ರೈ ಸಿಎಎ, ಏನ್ ಅರ್ ಸಿ ವಿರೋಧಿಸಿ ಮಂಗಳೂರಲ್ಲಿ ಅನೇಕ ಪ್ರತಿಭಟನೆಗಳು ನಡೆದಿವೆ. ಮಂಗಳೂರು ಒಳ್ಳೆಯ ಸುದ್ದಿಗಳಿಂದ ಪ್ರಸಿದ್ಧವಾಗಬೇಕು ಹೊರತು ಕೆಟ್ಟ ಕಾರಣಗಳಿಗಾಗಿ ಅಲ್ಲಎಂದು ಹೇಳಿದರು. […]