ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯಕ್ಕೆ ಬಾಳೆ ಮುಹೂರ್ತ

Monday, November 30th, 2020
Balemuhurtha

ಉಡುಪಿ :  ಶ್ರೀಕೃಷ್ಣ ಮಠದ  251ನೇ ಪರ್ಯಾಯಕ್ಕೆ ಕೃಷ್ಣಾಪುರ ಮಠದ ಯತಿಗಳಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ಬಾಳೆ ಮುಹೂರ್ತದ ಸಾಂಪ್ರದಾಯಿಕ ವಿಧಿವಿಧಾನಗಳು ನಡೆದವು. ಜನಪ್ರತಿನಿಧಿಗಳು ಸೇರಿದಂತೆ ಅನೇಕ ಮಂದಿ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಮುಂದೆ ನಡೆಯುವ ಕೃಷ್ಣಾಪುರ ಮಠದ ಪರ್ಯಾಯ ಶ್ರೀಕೃಷ್ಣ ಮಠದ ಇತಿಹಾಸದ 251ನೇ ಪರ್ಯಾಯವಾಗಿದೆ. ಉಡುಪಿಯಲ್ಲಿರುವ ಅಷ್ಟಮಠಗಳ ನಡುವೆ ಶ್ರೀಕೃಷ್ಣನ ಪೂಜೆಗೆ ದ್ವೆವಾರ್ಷಿಕ ಪರ್ಯಾಯ ಸಂಪ್ರದಾಯ ಪ್ರಾರಂಗೊಂಡ ನಂತರ ಈಗ ನಡೆದಿರುವ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರ […]

ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಎರಡನೇ ಪರ್ಯಾಯಕ್ಕೆ ಪೂರ್ವಭಾವಿ ಬಾಳೆ ಮುಹೂರ್ತ

Monday, December 5th, 2016
Bale-muhurta

ಉಡುಪಿ: ಶ್ರೀಕೃಷ್ಣ ಮಠದಲ್ಲಿ 2018 ಜ. 18ರಂದು ಪರ್ಯಾಯ ಪೂಜೆಯನ್ನು ವಹಿಸಿಕೊಳ್ಳಲಿರುವ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಎರಡನೇ ಪರ್ಯಾಯಕ್ಕೆ ಪೂರ್ವಭಾವಿ ಬಾಳೆ ಮುಹೂರ್ತ ರವಿವಾರ ಜರಗಿತು. ಪಲಿಮಾರು ಮಠದಿಂದ ದ್ವೈವಾರ್ಷಿಕ ಪರ್ಯಾಯ ಚಕ್ರ ಆರಂಭಗೊಳ್ಳಲಿದ್ದು ಮುಂದಿನ ಸರದಿ 32ನೇ ಚಕ್ರವಾಗಿದೆ. ಶ್ರೀ ಅನಂತೇಶ್ವರ, ಶ್ರೀ ಚಂದ್ರೇಶ್ವರ, ಶ್ರೀಕೃಷ್ಣ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಪಲಿಮಾರು ಮಠಕ್ಕೆ ಬಂದು ಅಲ್ಲಿಂದ ಬಾಳೆ ಗಿಡಗಳನ್ನು ಮಥುರಾ ಛತ್ರದ ಬಳಿಗೆ ಮೆರವಣಿಗೆಯಲ್ಲಿ ತಂದು ಬಾಳೆ ಮುಹೂರ್ತ, ತುಳಸಿ ಮುಹೂರ್ತ […]