ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕರಿಗೆ ಬುದ್ದಿಮಾತು ಹೇಳಿದ ಕಾರು ಚಾಲಕನ ಕೊಲೆ
Tuesday, July 14th, 2020
ನವದೆಹಲಿ: ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕರಿಗೆ ಹಾಗೆ ಮಾಡಬೇಡಿ ಎಂದಿದ್ದಕ್ಕೆ ಮೂವರು ಹುಡುಗರು ಸೇರಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಬುದ್ದಿಮಾತು ಹೇಳಿದ 25 ವರ್ಷದ ಯುವಕನ ಮೇಲೆ ಮೂವರು ಹುಡುಗರು ಹಲ್ಲೆ ಮಾಡಿ ಸಾಯಿಸಿರುವ ಘಟನೆ ಪಶ್ಚಿಮ ದೆಹಲಿಯ ರಘುಬಿರ್ ನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಮನೀಶ್ ಎಂದು ಗುರುತಿಸಲಾಗಿದ್ದು ಈತ ಖಾಸಗಿ ಕಾರು ಚಾಲಕನಾಗಿದ್ದ. ಈತನನ್ನು ಕೊಂದ ಮೂವರು ಹುಡುಗರು 16-17 ವರ್ಷದವರಾಗಿದ್ದು ಅವರನ್ನು ಬಂಧಿಸಲಾಗಿದೆ. ಘಟನೆ ನಡೆದಿದ್ದು ಜುಲೈ 8ರಂದು. ಮೂವರೂ ಮನೀಶ್ […]