ಮುಖದಲ್ಲಿ ಮೊಡವೆಯಿದೆ ಎಂದು 15ರ ಬಾಲಕಿ ನೇಣಿಗೆ ಶರಣು
Monday, January 4th, 2021ಪುತ್ತೂರು : ಮುಖದಲ್ಲಿ ಮೊಡವೆಯಿದೆ ಎಂದು ಬಾಲಕಿಯೊಬ್ಬಳು ಮುಜುಗರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಪಾಲ್ತಾಡಿ ಯಲ್ಲಿ ನಡೆದಿದೆ. ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ದಿವ್ಯಾ (15) ಮೊಡೆವೆಯಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡ ಬಳಿಕ ತುಂಬಾ ದುಃಖಿತಳಾಗಿದ್ದ ದಿವ್ಯಾ ಅದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಗೇರುಗುಡ್ಡೆಯಲ್ಲಿ ಬಾಲಕಿ ನೇಣಿಗೆ ಶರಣಾಗಿದ್ದಾರೆ.