ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕರಿಗೆ ಬುದ್ದಿಮಾತು ಹೇಳಿದ ಕಾರು ಚಾಲಕನ ಕೊಲೆ

Tuesday, July 14th, 2020
Raghuveer Circle

ನವದೆಹಲಿ: ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕರಿಗೆ ಹಾಗೆ ಮಾಡಬೇಡಿ ಎಂದಿದ್ದಕ್ಕೆ ಮೂವರು ಹುಡುಗರು ಸೇರಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಬುದ್ದಿಮಾತು ಹೇಳಿದ 25 ವರ್ಷದ ಯುವಕನ ಮೇಲೆ ಮೂವರು ಹುಡುಗರು ಹಲ್ಲೆ ಮಾಡಿ ಸಾಯಿಸಿರುವ ಘಟನೆ ಪಶ್ಚಿಮ ದೆಹಲಿಯ ರಘುಬಿರ್ ನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಮನೀಶ್ ಎಂದು ಗುರುತಿಸಲಾಗಿದ್ದು ಈತ ಖಾಸಗಿ ಕಾರು ಚಾಲಕನಾಗಿದ್ದ. ಈತನನ್ನು ಕೊಂದ ಮೂವರು ಹುಡುಗರು 16-17 ವರ್ಷದವರಾಗಿದ್ದು ಅವರನ್ನು ಬಂಧಿಸಲಾಗಿದೆ. ಘಟನೆ ನಡೆದಿದ್ದು ಜುಲೈ 8ರಂದು. ಮೂವರೂ ಮನೀಶ್ […]

ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ‌ ಮೊಬೈಲ್ ಬ್ಲಾಸ್ಟ್ : ಗಾಯಗೊಂಡ ಬೈಕ್ ಸವಾರ

Monday, February 17th, 2020
bike

ಮೈಸೂರು : ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ‌ ಮೊಬೈಲ್ ಬ್ಲಾಸ್ಟ್ ಆದ ಪರಿಣಾಮ ಬೈಕ್ ಸವಾರರೋರ್ವರು ಕುಸಿದು ಬಿದ್ದ ಪರಿಣಾಮ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ರಸ್ತೆಯಲ್ಲಿ ನಡೆದಿದೆ. ಗಾಯಗೊಂಡವರನ್ನು ಕುರಿಹುಂಡಿಯ ಬಸವರಾಜು ( ಬಸವಣ್ಣ) ಎಂದು ಗುರುತಿಸಲಾಗಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕಿಸೆಯಲ್ಲಿದ್ದ ವಿವೋ ಕಂಪನಿಯ ಮೊಬೈಲ್ ಬ್ಲಾಸ್ಟ್ ಆಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ರಸ್ತೆಯಲ್ಲಿ ಕುರಿಹುಂಡಿಯಿಂದ ಹುಲ್ಲಹಳ್ಳಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಮೊಬೈಲ್ ಸಿಡಿದ […]

ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಯುವಕ ಕಬ್ಬಿಣದ ಸರಳುಗಳಿಗೆ ಸಿಲುಕಿ ಮೃತ್ಯು

Tuesday, January 28th, 2020
Rockey

ಮೈಸೂರು : ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ಯುವಕನ ನಿಯಂತ್ರಣಕ್ಕೆ ಬೈಕ್ ಸಿಗದ ಕಾರಣ ಬೈಕ್ ಕಂಪೌಂಡ್ ಗೆ ಗುದ್ದಿದ್ದು, ಕಂಪೌಂಡ್ ಗೆ ಅಳವಡಿಸಲಾದ ಕಬ್ಬಿಣದ ಸರಳುಗಳಿಗೆ ಸಿಲುಕಿ ಯುವಕ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ವಿಜಯಶ್ರೀಪುರ ನಿವಾಸಿ ರಾಖಿ(20) ಎಂದು ಗುರುತಿಸಲಾಗಿದ್ದು, ಈತ ನಿನ್ನೆ ರಾತ್ರಿ ಮದ್ಯಪಾನ ಮಾಡಿ ಸ್ಪ್ಲೆಂಡರ್ ಬೈಕ್ ಚಲಾಯಿಸುತ್ತಿದ್ದ. ವಿಜಯ ನಗರ ಟ್ಯಾಂಕ್ ಕಡೆ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಶಾಸಕ ಜಿ.ಟಿ.ದೇವೇಗೌಡರ ಮನೆಯ ಕಂಪೌಂಡ್ […]

ಬೈಕ್​ ಮೇಲೆ ಶಾಲಾ ಬಸ್​ ಹರಿದು 5 ವರ್ಷದ ಬಾಲಕಿ ಸ್ಥಳದಲ್ಲೇ ಮೃತ್ಯು

Thursday, November 7th, 2019
rajanandini

ಚಿಕ್ಕೋಡಿ : ಶಾಲಾ ಬಸ್ ಬೈಕ್ ಮೇಲೆ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದಲ್ಲಿ ನಡೆದಿದೆ. ರಾಜನಂದಿನಿ (5) ಮೃತಪಟ್ಟ ಬಾಲಕಿ. ಬೈಕ್ನಲ್ಲಿ ಇದ್ದ ಇಬ್ಬರಿಗೆ ಗಾಯಗಳಾಗಿವೆ. ರಾಜನಂದಿನಿ ತನ್ನ ತಾಯಿ ಜತೆ ಬೈಕ್ನಲ್ಲಿ ತೆರಳುತ್ತಿದ್ದಳು. ಸಹೋದರ ಮಾವ ಬೈಕ್ ಚಾಲನೆ ಮಾಡುತ್ತಿದ್ದ. ಬೈಕ್ ಮೆಹಬೂಬ್ ನಗರದ ಬಳಿ ಚಲಿಸುತ್ತಿದ್ದ ವೇಳೆ ಎದುರಿನ ತಿರುವಿನಿಂದ ವೇಗವಾಗಿ ಬಂದ ಸೇಂಟ್ ಫ್ರಾನ್ಸಿಸ್ ಶಾಲೆಯ ಬಸ್ ಬೈಕ್ ಮೇಲೆ ಹರಿಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಸ್ನಲ್ಲಿ ವಿದ್ಯಾರ್ಥಿಗಳು […]

ಚಿಕ್ಕಮಗಳೂರು : ಕುಸಿದು ಬಿದ್ದ ಸೇತುವೆ; ಬೈಕ್ ಸವಾರನಿಗೆ ಗಂಭೀರ ಗಾಯ

Monday, October 14th, 2019
mudigere

ಚಿಕ್ಕಮಗಳೂರು : ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಸೇತುವೆ ಕುಸಿದು ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಮಾಳಿಂಗನಾಡು ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ. ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿವಾರ ಸಂಜೆ ಸುರಿದ ಭಾರೀ ಮಳೆಗೆ ಹಿರೇಬೈಲು – ಕೂವೆ ಸಂಪರ್ಕಿಸುವ ಸೇತುವೆ ಮುರಿದು ಬಿದ್ದಿದೆ.    

ಹೆಲ್ಮೆಟ್ ಧರಿಸದೇ ಬಂದ ಬೈಕ್​ ಸವಾರ ಪೊಲೀಸರನ್ನು ಕಂಡು ಪರಾರಿ

Friday, September 27th, 2019
kadaba

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಜರುಗಿದೆ. ಹೆಲ್ಮೆಟ್ ಧರಿಸದೇ ಬಂದ ಬೈಕ್ ಸವಾರನೋರ್ವ ತನ್ನೊಂದಿಗೆ ಬಂದಿದ್ದವನನ್ನು ಇಕ್ಕಟ್ಟಿಗೆ ಸಿಲುಕಿಸಿ ಪರಾರಿಯಾಗಿರುವ ಈ ಘಟನೆ ಕಡಬದಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದ ಬೈಕ್ ಸವಾರನು ಪೊಲೀಸರನ್ನು ಕಂಡೊಡನೆ ಹಿಂಬದಿ ಸವಾರನನ್ನು ಕೆಳಗಿಳಿಸಿ ಬಂದ ದಾರಿಯಲ್ಲೇ ಹಿಂತಿರುಗಿ ಹೋಗಿದ್ದಾನೆ. ಆಗ ನಡೆದುಕೊಂಡು ಹೋಗುತ್ತಿದ್ದ ಹಿಂಬದಿ ಸವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಕಡಬಕ್ಕೆ ಗುರುವಾರ ಗೃಹಪ್ರವೇಶಕ್ಕೆಂದು ಕಾಸರಗೋಡಿನಿಂದ ಆಗಮಿಸಿದ್ದ ಯುವಕನನ್ನು […]

ಬೈಕ್-ಕಾರಿನ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

Thursday, August 29th, 2019
bike-car-dikki

ಮೈಸೂರು : ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಂಜನಗೂಡು- ಗುಂಡ್ಲುಪೇಟೆ ಹೆದ್ದಾರಿಯ ಸಿಂಧುವಳ್ಳಿ ಪುರ ಬಳಿ ನಡೆದಿದೆ. ಕಿರಣ್ ಕುಮಾರ್ ಹಾಗೂ ಪ್ರತಾಪ್ ಮೃತ ದುರ್ದೈವಿಗಳು, ಇವರು ಗುಂಡ್ಲುಪೇಟೆಯ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳೆಂದು ಗುರುತಿಸಲಾಗಿದೆ. ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ಹೆದ್ದಾರಿಯಲ್ಲಿ ಬರುವಾಗ, ಗುಂಡ್ಲುಪೇಟೆಯಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಪುಡಿ ಪುಡಿಯಾಗಿದೆ. ಇನ್ನು ಯುವಕರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ […]

ಬೈಕ್​ಗಳ ನಡುವೆ ಡಿಕ್ಕಿ: ಓರ್ವ ಸ್ಥಳದಲ್ಲಿಯೇ ಸಾವು

Monday, November 26th, 2018
accident

ಹುಬ್ಬಳ್ಳಿ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡರುವ ಘಟನೆ ಹುಬ್ಬಳ್ಳಿಯ ಹೊರವಲಯದ ಗದಗ ರಸ್ತೆಯಲ್ಲಿ ನಡೆದಿದೆ. ಚಿನ್ನಪೇಟೆ ನಿವಾಸಿ ವೆಂಕಟೇಶ ಸಾಲಗಾರ(50) ಮೃತ ದುರ್ದೈವಿ. ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಂದು ಬೈಕ್ನಲ್ಲಿ ಮೂರು ಜನ, ಇನ್ನೊಂದು ಬೈಕ್ನಲ್ಲಿ ಇಬ್ಬರು ಇದ್ದರು ಎನ್ನಲಾಗಿದೆ. ಈ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ಯಾಂಕರ್​ ಹಾಗೂ ಬೈಕ್​ ನಡುವೆ ಅಪಘಾತ: ಬೈಕ್​ ಸವಾರ ಸ್ಥಳದಲ್ಲೇ ಸಾವು

Tuesday, October 30th, 2018
accident

ಮಂಗಳೂರು: ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತವಾಗಿರುವ ಕಾರಣ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಮೆಲ್ಕಾರ್ ಸಮೀಪದ ಬೋಲಂಗಡಿ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ವಿಟ್ಲ ಪಾತ್ರತೋಟ ಸಮೀಪದ ಕೆಲಿಂಜ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಹಸನ್ ಶಾಹಿಕ್(28) ಮೃತವ ದುರ್ದೈವಿ. ಮೂಡುಬಿದಿರೆಯ ಬುರ್ಕಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಸನ್, ಎಂದಿನಂತೆ ರಾತ್ರಿ ಕೆಲಸ ಮುಗಿಸಿ ಮೂಡುಬಿದಿರೆಯಿಂದ ಬಸ್ನಲ್ಲಿ ಬಂದು ಬಿಸಿ ರೋಡ್ನಲ್ಲಿ ಇರಿಸಿದ್ದ ತನ್ನ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ಮೆಲ್ಕಾರ್ ಸಮೀಪ ಬೈಕ್ಗೆ […]

ನಗರದ ಹೊರವಲಯದಲ್ಲಿ ಸರಣಿ ಅಪಘಾತ: ಮೂವರ ದುರ್ಮರಣ

Friday, September 14th, 2018
accident

ಬೆಂಗಳೂರು: ನಗರದ ಹೊರವಲಯದಲ್ಲಿ ಸರಣಿ ಅಪಘಾತ ನಡೆದಿದ್ದು, ಹಿಂಬದಿಯಿಂದ ಬಂದ ಕಾರೊಂದು ಬೈಕ್ ಹಾಗೂ ಲಾರಿಗೆ ಗುದ್ದಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಬೆಂಗಳೂರು ಹೊರವಲಯ ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಕುಡಿದು ಚಾಲನೆ ಮಾಡುತ್ತಿದ್ದ ಕಾರಿನ ಸವಾರ ಮೊದಲಿಗೆ ಬೈಕ್ಗೆ ಗುದ್ದಿದ್ದಾನೆ. ತದನಂತರ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಮೃತಪಟ್ಟಿದ್ದಾರೆ.‌ ಮೃತಪಟ್ಟವರು ಯಾರೆಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಸ್ಥಳಕ್ಕೆ ಆವಲಹಳ್ಳಿ ಪೊಲೀಸರು ಭೇಟಿ‌‌‌‌ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.