ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ವೈದ್ಯರಿಗೆ ಹೃದಯಾಘಾತ
Saturday, June 22nd, 2019ಮಂಗಳೂರು : ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ರಾಜೇಶ್ ಭಟ್ (48) ನಗರದ ಮಂಗಳಾ ಸ್ಟೇಡಿಯಂನಲ್ಲಿ ಜೂ.22 ರಂದು ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಸಂದರ್ಭ ಕುಸಿದು ಬಿದ್ದು ವಿಧಿವಶರಾಗಿದ್ದಾರೆ. ಇವರು ಮಣ್ಣಗುಡ್ಡೆಯ ಗಾಂಧಿನಗರದ ತಮ್ಮದೇ ಪಾಲುದಾರಿಕೆಯ “ಭಟ್ ನರ್ಸಿಂಗ್ ಹೋಮ್ ” ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಡಾ.ರಾಜೇಶ್ ಅವರು ಪ್ರಸಿದ್ಧ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿದ್ದ ದಿವಂಗತ ಡಾ.ಮಾಲತಿ ಭಟ್ ಅವರ ಪುತ್ರರಾಗಿದ್ದಾರೆ. ಪಂದ್ಯಾಟದ ವೇಳೆ ಇವರು […]