ಸೈನಿಕರ ಸಮವಸ್ತ್ರ ಇತರರು ಧರಿಸಕೂಡದು

Monday, March 7th, 2016
Kasaragod DC

ಕಾಸರಗೋಡು: ಸಾರ್ವಜನಿಕರು ಹಾಗೂ ಸೆಕ್ಯೂರಿಟಿ ನೌಕರರು ಸಹಿತ ಇತರ ಯಾರೇ ಆಗಲಿ ಸೈನಿಕರ ಸಮವಸ್ತ್ರಗಳನ್ನು, ಸೈನಿಕ ಮಾದರಿಯ ಬಟ್ಟೆಬರೆಗಳನ್ನು ಧರಿಸಕೂಡದೆಂದು ಕಾಸರಗೋಡು ನೂತನ ಜಿಲ್ಲಾಧಿಕಾರಿ ಇ.ದೇವದಾಸನ್ ತಿಳಿಸಿದ್ದಾರೆ. ಪಂಜಾಬ್‌ನ ಪಠಾಣ್ ಕೋಟ್ ವಾಯುಸೇನಾ ಕೇಂದ್ರಗಳಿಗೆ ಇತ್ತೀಚೆಗೆ ಭಯೋತ್ಪಾದಕರು ಆಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಈ ಕ್ರಮ ಕೈಗೊಳ್ಳಲಾಗಿದೆ. ಅದರ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲೂ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ. ಅನಧಿಕೃತವಾಗಿ ಸೈನಿಕರ ಸಮವಸ್ತ್ರ ಧರಿಸುವುದು, ಅಂತಹ ಸಮವಸ್ತ್ರಗಳನ್ನು ಮಾರಾಟ ಮಾಡುವುದು ಮುಂತಾದವುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ […]

ಬ್ಯಾರಿ ಅಕಾಡಮಿಯಿಂದ ರಮಝಾನ್ ಸ್ನೇಹಕೂಟ

Sunday, July 12th, 2015
Ramzan iftar

ಮಂಗಳೂರು : ಕೇವಲ ಹಸಿವಿನಿಂದ ಇದ್ದರೆ ಅದು ಉಪವಾಸವಾಗುವುದಿಲ್ಲ. ಆರಾಧನೆಯೊಂದಿಗೆ ಉಪವಾಸಿಗನ ಹೃದಯ ಶುದ್ಧಿಯೂ ಇರಬೇಕಾಗಿದೆ. ಅಂತಹ ಉಪವಾಸ ಮಾತ್ರ ಅಲ್ಲಾಹನಿಗೆ ಸ್ವೀಕಾರ್ಹವಾಗಲಿದೆ ಎಂದು ನಗರದ ಪೌಝಿಯಾ ಜುಮಾ ಮಸ್ಜಿದ್ನ ಖತೀಬ್ ಅಬುಲ್ ವಫಾ ಖಾಸಿಂ ಮುಸ್ಲಿಯಾರ್ ಹೇಳಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಕಾರದೊಂದಿಗೆ ಶುಕ್ರವಾರ ಟಿಆರ್ಎಫ್ ಸಭಾಂಗಣದಲ್ಲಿ ಹಮ್ಮಿಕೊಂಡ `ರಮಝಾನ್ ಸ್ನೇಹಕೂಟ’ದಲ್ಲಿ `ಬ್ಯಾರಿ ಸಂಸ್ಕ್ಕೃತಿ ಮತ್ತು ರಮಝಾನ್ ವ್ರತ’ ವಿಷಯದಲ್ಲಿ ಮಾತನಾಡಿದರು. ಬ್ಯಾರಿ ಎಂಬುದು ಇಸ್ಲಾಮಿನಿಂದ ಪ್ರತ್ಯೇಕವಾದುದಲ್ಲ. ಇಸ್ಲಾಂ ಮಾತೃಭಾಷೆಯನ್ನು […]