ಅಗ್ನಿವೀರನಾಗಿ ಆಯ್ಕೆಗೊಂಡ ಪುನೀತ್‌ರಾಜ್‌ಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನ

Thursday, October 24th, 2024
Puneeth-Raj

ಪುತ್ತೂರು : ಭಾರತೀಯ ಸೇನೆ ನಡೆಸುವ ʼಅಗ್ನಿಪಥ್‌ʼ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಪುನೀತ್‌ರಾಜ್‌ ʼಅಗ್ನಿವೀರ್‌ʼ ಗೆ ಆಯ್ಕೆಗೊಂಡಿರುತ್ತಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಮಲೆನಾಡಿನ ತಪ್ಪಲು ಗ್ರಾಮವಾದ ಕೊಂಬಾರಿನವರಾದ ಇವರು ಬಡತನದ ಬೇಗೆಯಲ್ಲಿ ಬೆಂದು ಬೆಳೆದವರು. ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಸ್ವಂತ ಮನೆಯೂ ಇಲ್ಲದೆ ಬಂಧುಗಳ ಆಶ್ರಯದಲ್ಲಿ ತಾಯಿಯ ಜೊತೆ ವಾಸಮಾಡುತ್ತಿದ್ದರು.ದುರ್ದೈವವೆಂದರೆ, ಮೂರು ವರ್ಷಗಳ ಹಿಂದೆ ಕಾಯಿಲೆಯಿಂದ ತಾಯಿಯೂ ಮೃತಪಟ್ಟರು. ಬಳಿಕ ಮಾವನ ನೆರವಿನೊಂದಿಗೆ ವಿದ್ಯಾಭ್ಯಾಸ ಮುಂದುವರಿಸಿದ ಇವರು, […]

ಭಾರತೀಯ ಸೇನೆಯ ಗಡಿಭದ್ರತಾ ಪಡೆಗೆ ಕರಾವಳಿಯ ಇಬ್ಬರು ಯುವತಿಯರ ಸರ್ಪಡೆ

Tuesday, March 30th, 2021
Military

ಮಂಗಳೂರು :  ಭಾರತೀಯ ಸೇನೆಯ ಗಡಿಭದ್ರತಾ ಪಡೆ ( ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಗೆ  ಕರಾವಳಿಯ ಇಬ್ಬರು ವನಿತೆಯರು, ದೇಶ ಸೇವೆಗೆ ಆಯ್ಕೆಯಾಗಿದ್ದು, ಇದೇ ಏಪ್ರಿಲ್ 1ರಿಂದ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದ್ದಾರೆ. ಭಾರತೀಯ ಸೇನೆಯ ಗಡಿಭದ್ರತಾ ಪಡೆ ( ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಗೆ ಆಯ್ಕೆಯಾಗಿರುವ ಪುತ್ತೂರು ತಾಲೂಕಿನ ಬಲ್ನಾಡಿನ ರಮ್ಯಾ ಹಾಗೂ ಕಡಬ ತಾಲೂಕಿನ ಕಾಣಿಯೂರಿನ ಯೋಗಿತಾ ಇನ್ನೆರಡು ದಿನದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಪುತ್ತೂರು ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜಾವತಿ ದಂಪತಿಯ ಪುತ್ರಿಯಾಗಿರುವ […]

ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಅಪೂರ್ವ

Thursday, December 12th, 2019
ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಅಪೂರ್ವ

ಮಡಿಕೇರಿ :ಕೊಡಗು ಜಿಲ್ಲೆ ಭಾರತೀಯ ಸೇನೆಗೆ ತನ್ನದೇ ಆದ ಅಪೂರ್ವ ಕೊಡುಗೆಗಳನ್ನು ನೀಡಿದ್ದು, ಇಲ್ಲಿನವರೇ ಆದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ ಮತ್ತು ಅಸಂಖ್ಯ ಸಿಪಾಯಿಗಳು ರಾಷ್ಟ್ರ ರಕ್ಷಣೆಗೆ ಅತ್ಯುನ್ನತವಾದ ಸೇವೆ ಸಲ್ಲಿಸಿದ್ದಾರೆಂದು ದಕ್ಷಿಣ ವಲಯದ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಸ್.ಕೆ.ಸಾನಿ ತಿಳಿಸಿದ್ದಾರೆ. ನಗರದ ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿ ಆಯೋಜಿತ ’ಮಾಜಿ ಸೈನಿಕರ ಸಮಾವೇಶ’ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ನಿವೃತ್ತ ಸೈನಿಕರಿಗೆ ಸರ್ಕಾರ ಹತ್ತು ಹಲವು ಸವಲತ್ತುಗಳನ್ನು ನೀಡುತ್ತಿದ್ದು, ’ಒಂದು […]

ಭಾರತದ ಸೇನಾ ಕಾರ್ಯಾಚರಣೆಗೆ ವ್ಯಾಪಕ ಶ್ಲಾಘನೆ

Friday, September 30th, 2016
City celebrates

ಮಂಗಳೂರು/ಉಡುಪಿ/ಕಾಸರಗೋಡು/ಮಡಿಕೇರಿ: ಭಾರತದ ಸೇನಾ ಕಾರ್ಯಾಚರಣೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಮಧ್ಯಾಹ್ನದ ವೇಳೆಗೆ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ವಿವಿಧೆಡೆ ಪಟಾಕಿ ಸಿಡಿಸಲಾಯಿತು. ಅದು ರಾತ್ರಿವರೆಗೂ ಮುಂದುವರಿಯಿತು. ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿತಾದ ಸುದ್ದಿ, ಯೋಧರಿಗೆ ಅಭಿನಂದನೆಗಳ ಮಹಾಪೂರವೇ ಹರಿದಾಡಿತು. ಜೈಹಿಂದ್‌ ಘೋಷಣೆ, ಹೇಳಿಕೆಗಳು ಎಲ್ಲೆಲ್ಲೂ ಕೇಳಿಸಿತು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರಗಾಮಿಗಳನ್ನು ಸದೆ ಬಡಿದ ಭಾರತೀಯ ಸೇನೆಯ ಯೋಧರನ್ನು ಬಿಜೆಪಿ ಮಂಗಳೂರು ದಕ್ಷಿಣದ ಅಧ್ಯಕ್ಷ ವೇದವ್ಯಾಸ್‌ ಕಾಮತ್‌ ಅವರು ಶ್ಲಾ ಸಿದ್ದಾರೆ. ಕ್ಯಾ| ಕಾರ್ಣಿಕ್‌ ದೇಶದ ಆಂತರಿಕ ಭದ್ರತೆಗೆ […]

ಸೇನಾ ನೇಮಕಾತಿ ರಾೄಲಿಗೆ 3800ಕ್ಕೂ ಹೆಚ್ಚು ಆಕಾಂಕ್ಷಿಗಳು ಹಾಜರ್

Wednesday, April 6th, 2011
ಭಾರತೀಯ ಸೇನೆಯ ವಿವಿಧ ಹುದ್ದೆಗಳ ನೇಮಕಾತಿ

ಮಂಗಳೂರು : ಭಾರತೀಯ ಸೇನೆಯ ವಿವಿಧ ಹುದ್ದೆಗಳ ನೇಮಕಾತಿಗಾಗಿ ಎಪ್ರಿಲ್ 1 ರಿಂದ ಆರಂಭವಾಗಿರುವ ನೇಮಕಾತಿ ರಾೄಲಿಗೆ ರಾಜ್ಯದ 11 ಜಿಲ್ಲೆಗಳಿಂದ ಸುಮಾರು 3800 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆಯೆಂದು ನೆಮಕಾತಿ ರ್ಯಾಲಿಯ ಮುಖ್ಯ ಬ್ರಿಗೇಡಿಯರ್ ಎಂ.ಎಂ.ಗುಪ್ತಾ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು. ಅವರು ಮಂಗಳಾ ಕ್ರೀಡಾಂಗಣದಲ್ಲಿ ಇಂದು ನಡೆದ ಅಭ್ಯರ್ಥಿಗಳ ಸಂದರ್ಶನದ ವೇಳೆಯಲ್ಲಿ ಮಾತನಾಡಿ, ಭಾರತೀಯ ಸೇನೆಗೆ ನೇಮಕ ವಾದಲ್ಲಿ ಆರಂಭದಲ್ಲೆ ರೂ.15,000 ಮೇಲ್ಪಟ್ಟು ವೇತನ ಸಿಗಲಿದೆ.ಇದರ ಜೊತೆಗೆ ಆಕರ್ಷಕ ಭತ್ಯೆಗಳು ದೊರೆಯಲಿವೆ. ಮೈಸೂರಿನ ಚಾಮುಂಡಿ […]