ಮೊಬೈಲ್‌ ಕದಿಯುವ ಯತ್ನದಲ್ಲಿದ್ದ ಯುವಕರ ತಂಡವನ್ನು ಬೆನ್ನಟ್ಟಿ ಹಿಡಿದ ಪೊಲೀಸ್

Thursday, January 13th, 2022
Varun-Alva

ಮಂಗಳೂರು:  ಮೊಬೈಲ್‌ ಕದಿಯುವ ಯತ್ನದಲ್ಲಿದ್ದ ಯುವಕರ ತಂಡವನ್ನು ಸ್ಥಳೀಯರು ಹಾಗೂ ಮಂಗಳೂರು ಪೊಲೀಸ್‌ ಕಮಿಷನರ್‌ ಅವರ ಕಚೇರಿ ಸಿಬ್ಬಂದಿ ಸೇರಿ ಅಟ್ಟಿಸಿ ಹಿಡಿದಿದ್ದಾರೆ. ಆರೋಪಿಗಳಾದ ಅತ್ತಾವರ ಬಾಬುಗುಡ್ಡೆಯ ಶಮಂತ್‌(20), ನೀರುಮಾರ್ಗ ಪಾಲ್ದನೆಯ ಹರೀಶ್‌ ಪೂಜಾರಿ(32) ಎಂಬವರನ್ನು ಬಂಧಿಸಲಾಗಿದೆ. ಬಿಹಾರ ಮೂಲದ ವ್ಯಕ್ತಿಯೊಬ್ಬನಿಂದ ಮೊಬೈಲ್ ಕದ್ದ ಆರೋಪಿ ಶಮಂತ್‌ ಎಂಬಾತ ಓಡಿ ತಪ್ಪಿಸಿಕೊಳ್ಳುತ್ತಿರುವಾಗ ಕಮಿಷನರ್‌ ಅವರ ಕಚೇರಿ ಸಿಬ್ಬಂದಿ ವರುಣ್‌ ಆಳ್ವ ಎಂಬವರು ಅಟ್ಟಿಸಿಕೊಂಡು ಹೋಗಿ ಹಿಡಿದು ನೆಲಕ್ಕೆ ಒತ್ತಿ ಆತನನ್ನು ಅರೆಸ್ಟ್‌ ಮಾಡುವ ವಿಡಿಯೋ ವೈರಲ್‌ ಆಗಿದೆ. […]

ಯುವತಿಯ ಹಿಂದೆಯೇ ಆ್ಯಕ್ಟಿವಾದಲ್ಲಿ ಬಂದ ಯುವಕನೊಬ್ಬ ಹಾರ್ನ್‌ ಮಾಡಿ, ಕಣ್ಣ್ ಸನ್ನೆ ಮಾಡಿದ್ದ

Thursday, June 29th, 2017
Rashmi Shetty

ಮಂಗಳೂರು :  ಅಲೋಶಿಯಸ್ ಕಾಲೇಜಿನ ಬಳಿಯಿಂದ ಬಲ್ಮಠವರೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂದೆಯೇ ಆ್ಯಕ್ಟಿವಾದಲ್ಲಿ ಬಂದ ಯುವಕನೊಬ್ಬ ಹಾರ್ನ್‌ ಮಾಡಿ ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದ, ಕಣ್ಣ್ ಸನ್ನೆ ಮಾಡಿದ್ದ . ಆತ ಆಕೆಯನ್ನೇ ಹಿಂಬಾಲಿಸಿದಾಗ  ಆಕೆ ಆತನ ಸ್ಕೂಟರ್‌ನ ಫೊಟೋ ತೆಗೆದಿದ್ದಳು. ಬಳಿಕ ಅದರಲ್ಲಿದ್ದ ನೋಂದಣಿ ಸಂಖ್ಯೆ ಆಧಾರದಲ್ಲಿ ಸ್ಕೂಟರ್‌ನ ಮಾಲೀಕತ್ವದ ವಿವರಗಳನ್ನು ಶೋಧಿಸಿ ಫೇಸ್‌ಬುಕ್‌ನಲ್ಲಿ ಹಾಕಿದ್ದಳು. ರಶ್ಮಿ ಶೆಟ್ಟಿ ಬೌದ್ಧ ಧರ್ಮದ ಬಗ್ಗೆ ಎಂ.ಎ ಮಾಡುತ್ತಿದ್ದಾಳೆ . ಈಕೆಯ ಪೋಸ್ಟನ್ನು ಲೈಕ್ ಮಾಡಿದ ಮಿತ್ರರು , ಮಂಗಳೂರು ಪೊಲೀಸ್ ಕಮಿಷನರ್ ವಿಳಾಸವನ್ನೂ ಟ್ಯಾಗ್ ಮಾಡಿದ್ದಾರೆ. […]