ಆಸ್ಪತ್ರೆಗಳಲ್ಲಿ ಬಡವರಿಗೆ ಹೆಚ್ಚು ಆಸಕ್ತಿಯಿಂದ ಗುಣಮಟ್ಟದ ವೈದ್ಯಕೀಯ ಸೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Saturday, January 27th, 2024
ಆಸ್ಪತ್ರೆಗಳಲ್ಲಿ ಬಡವರಿಗೆ ಹೆಚ್ಚು ಆಸಕ್ತಿಯಿಂದ ಗುಣಮಟ್ಟದ ವೈದ್ಯಕೀಯ ಸೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಆಸ್ಪತ್ರೆಗಳಲ್ಲಿ ಬಡವರಿಗೆ ಹೆಚ್ಚು ಆಸಕ್ತಿಯಿಂದ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಬೇಕು. ನಮ್ಮ ಸಮಾಜದಲ್ಲಿ ಬಡವರೇ ಹೆಚ್ಚಿದ್ದಾರೆ ಹಾಗಾಗಿ ಸಮಾಜದ ದೃಷ್ಟಿಯಿಂದ ಇದು ಒಳ್ಳೆಯದು ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಲ್ಲೇಶ್ವರಂ ಕೆ .ಸಿ ಜನರಲ್ ಆಸ್ಪತ್ರೆಯ ನೂತನ ಉಚಿತ ಡಯಾಲಿಸಿಸ್ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದರು. 219 ಕೇಂದ್ರಗಳಲ್ಲಿ 800 ಡಯಾಲಿಸಿಸ್ ಯಂತ್ರಗಳ ಅಳವಡಿಕೆಬಡವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ದೊಡ್ಡ ಹೊರೆ. ವಾರಕ್ಕೆ ಮೂರು ಬಾರಿ ಮಾಡಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಮಾಡಿಸಿದರೆ 2000 ರೂ.ಗಳಿಗಿಂತ ಹೆಚ್ಚಿದೆ.ಬಡವರಿಗೆ ಇಷ್ಟು […]

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಮುಖ್ಯಮಂತ್ರಿಗಳ ಭೇಟಿ

Thursday, August 5th, 2021
Bjp office

ಬೆಂಗಳೂರು :  ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಬಿಜೆಪಿ ಕಚೇರಿಯಲ್ಲಿನ ಭಾರತ ಮಾತೆಯ ಭಾವಚಿತ್ರ ಹಾಗೂ ಶ್ರೀ ಜಗನ್ನಾಥರಾವ್ ಜೋಶಿ ಅವರ ಪುತ್ಥಳಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಸಿಹಿ ತಿನ್ನಿಸಿ ಶುಭ ಕೋರಿದರು.

ಮಲ್ಲೇಶ್ವರಂ ಪತ್ರಕರ್ತರ ವೇದಿಕೆಯಿಂದ ಸಹಾಯ ಹಸ್ತ

Sunday, May 24th, 2020
Malleshwaram Reporters

ಶಂಭು ಹುಬ್ಬಳ್ಳಿ – ಬೆಂಗಳೂರು : ಮಹಾಮಾರಿ ಕೋರೋನಾದಿಂದ ಈಗಾಗಲೇ ದೇಶವು ಆರ್ಥಿಕವಾಗಿ ಕಂಗೆಟ್ಟಿದೆ. ಈ ದಿಸೆಯಲ್ಲಿ ನಾವೆಲ್ಲರೂ ಒಟ್ಟಾಗಿ ಕೈ ಜೋಡಿಸಿ ಮಹಾಮಾರಿ ಮುಕ್ತವಾಗಿಸಲು ಪಣ ತೊಡಬೇಕಿದೆ. ಈಗಾಗಲೇ ಹಲವಾರು ಸಂಘಟನೆಗಳು, ಸಮಾಜ ಸೇವಕರು, ನಾನಾ ರೀತಿಯಲ್ಲಿ ಸಹಾಯ ಹಸ್ತ ನೆರವು ನೀಡುತ್ತ ಬಂದಿದ್ದಾರೆ. ಈ ಕೋರೋನಾ ಮಹಾಮಾರಿಯಿಂದ ಕಾರ್ಮಿಕ ವರ್ಗದಿಂದ ಹಿಡಿದು ಎಲ್ಲಾ ಸ್ತರದ ಜನರಿಗೂ ಬಿಸಿ ಮುಟ್ಟಿರುವುದು ಖೇದಕರ. ಸಾಮಾನ್ಯ ಜನರು ಆರ್ಥಿಕವಾಗಿ ಬಹಳ ನೊಂದಿದ್ದಾರೆ. ಕೇಂದ್ರ ಸರಕಾರವು ಈಗಾಗಲೇ ಎಲ್ಲಾ ವರ್ಗದ ಜನರಿಗೆ […]

ಬೆಂಗಳೂರು : ಕೆಲವೆಡೆ ಭಾರೀ ಸುರಿದ ಮಳೆ; ಮನೆಗೆ ನುಗ್ಗಿದ ನೀರು

Thursday, October 3rd, 2019
bengaluru

ಬೆಂಗಳೂರು : ಬುಧವಾರ ರಾತ್ರಿ ನಗರದ ಕೆಲವೆಡೆ ಸುರಿದ ಭಾರೀ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು. ನೀರು ನಿಂತಿದ್ದರಿಂದ ಗುರುವಾರ ಬೆಳಿಗ್ಗೆಯಿಂದಲೇ ನಗರದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಜನರು ವಾಹನ ಚಲಾಯಿಸಲು ಪರದಾಡಿದರು. ಸಿ.ವಿ.ರಾಮ್ ನಗರ, ಎಚ್ ಎಸ್ ಆರ್ ಲೇಜೌಟ್, ಮಲ್ಲೇಶ್ವರಂ, ವಿಜಯನಗರ ಹಾಗೂ ಜಲಹಳ್ಳಿ ಪ್ರದೇಶಕ್ಕೆ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದೆ. ಬುಧವಾರ ರಾತ್ರಿ 11.30ಕ್ಕೆ ಪ್ರಾರಂಭವಾದ ಮಳೆ ಬೆಳಿಗ್ಗೆ4.20ರ ವರೆಗೆ ನಿರಂತರವಾಗಿ ಸುರಿದಿದೆ. ಇಂದು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ […]

ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ ;ಡಾ. ಅಶ್ವತ್ಥ್​​ ನಾರಾಯಣ್

Monday, August 26th, 2019
Ashwath

ಬೆಂಗಳೂರು : ಮಂಗಳವಾರ 10.30 ಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹೈ ಕಮಾಂಡ್ ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಎಂದು ಘೋಷಿಸಿದೆ. ಅವರು ಅಧಿಕೃತವಾಗಿ ಪದ ಗ್ರಹಣ ಮಾಡುವುದು ಬಾಕಿ ಇದ್ದು, ಮಂಗಳವಾರ ಬೆಳಗ್ಗೆ 9 ಗಂಟೆಗೆ ಅವರನ್ನು ಪಕ್ಷದ […]

ಬೆಂಗಳೂರಲ್ಲಿ ಜೋರು ಮಳೆ, ಇನ್ನೂ ನಾಲ್ಕು ದಿನ ಛತ್ರಿ ಮರೆಯುವಂತಿಲ್ಲ..!

Wednesday, May 23rd, 2018
bangaluru

ಬೆಂಗಳೂರು: ರಾಜಕೀಯ ಕಾವಿನಿಂದ ಕುದಿಯುತ್ತಿರುವ ರಾಜ್ಯ ರಾಜಧಾನಿಗೆ ಬುಧವಾರ ಮಧ್ಯಾಹ್ನ ಬಂದ ಮಳೆ ತಂಪೆರಿದಿದೆ. ಮಧ್ಯಾಹ್ನ ಬಂದ ಜೋರು ಮಳೆ ವಾತಾವರಣಕ್ಕೆ ತಂಪು ಪೂಸಿದರೆ, ರಸ್ತೆಗಳಿಗೆ ಟ್ರಾಫಿಕ್ ಕಿರಿ-ಕಿರಿ ಹೆಚ್ಚಿಸಿದೆ. ಹಠಾತ್‌ನೆ ಬಂದ ಮಳೆಗೆ ರಸ್ತೆಗಳು ತುಂಬಿ ಹರಿಯುತ್ತಿವೆ. ಜಯನಗರ, ವಿಧಾನಸೌಧ, ಮಲ್ಲೇಶ್ವರ, ಇನ್ನೂ ಹಲವು ಕಡೆ ಜೋರು ಮಳೆಯಾಗಿದೆ. ಕುಮಾರಸ್ವಾಮಿ ಅವರ ಪಟ್ಟಾಭಿಷೇಕಕ್ಕೆ ಅಣಿಯಾಗಿದ್ದ ವಿಧಾನಸೌಧದ ಬಳಿಯೂ ಜೋರು ಮಳೆ ಆಗಿದೆ. ಮಳೆ ಮೊರೆತಕ್ಕೆ ಜನ ಚದುರಿ ಹೋಗಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ನಗರದಲ್ಲಿ ಇನ್ನೂ […]

ನಾಲ್ಕು ವರ್ಷ ಯುವತಿಯನ್ನು ಬಂಧನದಲ್ಲಿದ್ದಲ್ಲಿಟ್ಟು ಪೋಷಕರಿಂದ ಚಿತ್ರಹಿಂಸೆ

Tuesday, June 4th, 2013
Hemavathi

ಬೆಂಗಳೂರು : ಯುವತಿಯೊಬ್ಬಳನ್ನು ಆಕೆಯ ಪೋಷಕರೇ ಗೃಹ ಬಂಧನದಲ್ಲಿದ್ದಲ್ಲಿಟ್ಟು ಚಿತ್ರಹಿಂಸೆನೀಡಿದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ. ಮಗಳು ಪ್ರೀತಿ ಮಾಡಿದ ತಪ್ಪಿಗಾಗಿ ಆಕೆಯನ್ನು ಬಂಧನದಲ್ಲಿಡಲಾಗಿತ್ತು. ಮಂಗಳವಾರ ಆರೋಗ್ಯ ಸಚಿವ ಯು.ಟಿ. ಖಾದರ್ ಜೊತೆ ಪೊಲೀಸರು ಮತ್ತು ವೈದ್ಯರ ಸಹಾಯದಿಂದ ಗೃಹ ಬಂಧನದಲ್ಲಿದ್ದ ಯುವತಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೇಮಾವತಿ (35) ಮಲ್ಲೇಶ್ವರಂ ನಿವಾಸಿಗಳಾದ ರೇಣುಕಪ್ಪ ಮತ್ತು ಗೌರಮ್ಮ ನ ಮಗಳು.  ನಾಲ್ಕು ವರ್ಷಗಳಿಂದ ಅರೆನಗ್ನ ಸ್ಥಿತಿಯಲ್ಲಿ ಮನೆಯಲ್ಲಿ ಆಕೆಯನ್ನು ಕೂಡಿ ಹಾಕಿದ್ದರು.  ಯುವತಿ ಕೊಠಡಿ ಬಿಟ್ಟು ಹೊರಗೆ […]