ಮಹಿಳೆಯರು ಸಣ್ಣ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ : ನ್ಯಾಯಾಧೀಶೆ

Friday, September 20th, 2024
Nourishment-month

ಮಂಗಳೂರು : ಆರೋಗ್ಯವಾಗಿರಲು ಪೌಷ್ಟಿಕ ಆಹಾರಗಳು ಅಗತ್ಯವಾಗಿದ್ದು, ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ಸರಿಯಲ್ಲ. ಸಣ್ಣ ಅರೋಗ್ಯ ಸಮಸ್ಯೆಗೂ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ ಹೇಳಿದರು. ಅವರು ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ.ದ.ಕ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಶಿಶು ಅಭಿವೃದ್ಧಿ […]

ಮಹಿಳೆಯರು ನೀರು ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ : ನಳಿನ್ ಕುಮಾರ್ ಕಟೀಲ್

Thursday, November 9th, 2023
Jala-Deepavali

ಮಂಗಳೂರು : ನೀರು ನಿಸರ್ಗದ ಅಮೂಲ್ಯವಾದ ಕೊಡುಗೆ, ಮನುಷ್ಯ ಜೀವಿಸಲು ಆಹಾರಕ್ಕಿಂತ ನೀರು ಮಹತ್ವವಾದದ್ದು. ನೀರು ಇಲ್ಲದೆ ಯಾವುದೇ ಜೀವ ಬದುಕಲು ಅಸಾಧ್ಯ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಗುರುವಾರ ತುಂಬೆಯಲ್ಲಿ ಮಹಾನಗರ ಪಾಲಿಕೆ ನೀರು ಸಂಸ್ಕರಣ ಘಟಕದಲ್ಲಿ ನಡೆದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶನ, ಅಮೃತ 2.0 ಯೋಜನೆಯಡಿ ನಡೆದ ಜಲ ದೀಪಾವಳಿ “ಮಹಿಳೆಯರಿಗಾಗಿ ನೀರು ನೀರಿಗಾಗಿ ಮಹಿಳೆಯರು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿವಿದೆಡೆ ಮಳೆ ಇಲ್ಲದೆ […]

ಮಂಗಳೂರು : 7 ಮಂದಿ ಸರಗಳ್ಳರ ಬಂಧನ

Tuesday, November 2nd, 2021
chain Snatchers

ಮಂಗಳೂರು :  ಸರಗಳ್ಳತನ, ಸುಲಿಗೆ, ದ್ವಿಚಕ್ರ ವಾಹನ  ಕಳವು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ 24 ಪ್ರಕರಣಗಳಲ್ಲಿ 7 ಮಂದಿ ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾವೂರು ನಿವಾಸಿ ಅಬ್ದುಲ್ ಇಶಾಮ್ ಯಾನೆ ಇಶಾಮ್ (26), ಪಂಜಿಮೊಗರು ನಿವಾಸಿ ಸಫ್ವಾನ್ ಯಾನೆ ಸಪ್ಪು (29), ಕಾವೂರು ನಿವಾಸಿ ಮುಹಮ್ಮದ್ ತೌಸೀಫ್ ಯಾನೆ ಹಾರಿಸ್ ಯಾನೆ ಆಚಿ, ಶಾಂತಿನಗರ ನಿವಾಸಿ ಅಬ್ದುಲ್ ಖಾದರ್ ಸಿನಾನ್ (30), ಮಲ್ಲೂರು ಮುಹಮ್ಮದ್ ಪಜಲ್ ಯಾನೆ ಪಜ್ಜು (32), […]

ಪ್ರಜ್ಞಾ ಸ್ವಾದಾರ ಕೇಂದ್ರದಿಂದ ಮೂವರು ಮಹಿಳೆಯರು ನಾಪತ್ತೆ

Saturday, October 12th, 2019
womans

ಮಂಗಳೂರು : ಮೂವರು ಮಹಿಳೆಯರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಜ್ಞಾ ಸ್ವಾದಾರ ಕೇಂದ್ರ ಜಪ್ಪಿನಮೊಗರು ಈ ಸಂಸ್ಥೆಯಲ್ಲಿ ದಾಖಲಾಗಿದ್ದ ಕುಮಾರಿ (30), ಅಮಲ(30), ಸಂದ್ಯಾ (28) ಎಂಬ ಮೂರು ಮಹಿಳೆಯರು ಅಕ್ಟೋಬರ್ 8ರಂದು ರಾತ್ರಿ 11 ಗಂಟೆಯ ನಂತರ ಸ್ವಾದಾರ ಕೇಂದ್ರದಿಂದ ಕಾಣೆಯಾಗಿರುತ್ತಾರೆ. ಕಾಣೆಯಾದವರ ಚಹರೆ ಇಂತಿವೆ :ಹೆಸರು- ಕುಮಾರಿ ಪ್ರಾಯ- 30 ವರ್ಷ, ಎತ್ತರ- 5.6 ಅಡಿ, ಕಪ್ಪು ಮೈ ಬಣ್ಣ ವರುಟು ಮುಖ ದಪ್ಪಗಿನ ಶರೀರ, ಧರಿಸಿದ್ದ ಬಟ್ಟೆ- ಕಪ್ಪು ಮತ್ತು ಬಿಳಿ […]

ಶಬರಿಮಲೆಗೆ ಇಬ್ಬರು ಮಹಿಳೆಯರು ಹೇಗೆ ಪ್ರವೇಶ ಮಾಡಿದರೆಂದು ಈ ವಿಡಿಯೋ ನೋಡಿ

Wednesday, January 2nd, 2019
Sabarimala

ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗಲು ಒಗ್ಗಟ್ಟಿನೊಂದಿಗೆ ಮಹಿಳೆಯರು ಒಂದಾಗಬೇಕು: ಜಯಶರ್ಮಿಳಾ

Tuesday, July 19th, 2016
Anniversary

ಉಪ್ಪಳ: ಸರಕಾರ ಇಂದು ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇದರ ಬಗ್ಗೆ ಸ್ಪಷ್ಟ ಅರಿವಿನ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.ವಿದ್ಯಾಭ್ಯಾಸದ ಮಟ್ಟ ಮಹಿಳೆಯರಲ್ಲಿ ಸಮಾಧಾನಕರ ಮಟ್ಟದಲ್ಲಿದ್ದರೂ ದೌರ್ಜನ್ಯಗಳಂತಹ ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗದಿರುವುದು ಖೇದಕರವಾಗಿದ್ದು,ಈ ನಿಟ್ಟಿನಲ್ಲಿ ಒಗ್ಗಟ್ಟಿನೊಂದಿಗೆ ಮಹಿಳೆಯರು ಒಂದಾಗಬೇಕಿದೆಯೆಂದು ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಜಯಶರ್ಮಿಳಾ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಶ್ರಯದಲ್ಲಿ ಕುಬಣೂರಲ್ಲಿ ಕಾರ್ಯಾಚರಿಸುತ್ತಿರುವ ಚಿನ್ಮಯೀ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವವನ್ನು ಕುಬಣೂರು ಶ್ರೀರಾಮ ಎಯುಪಿ ಶಾಲೆಯಲ್ಲಿ ಉದ್ಘಾಟಿಸಿ ಅವರು […]

ಸ್ಥಳೀಯಾಡಳಿತ ಚುನಾವಣೆ ಫೈಟ್ ಗಿಳಿದ226 ಮಹಿಳೆಯರು !

Thursday, March 7th, 2013

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ  ಏಳು ಸ್ಥಳೀಯಾಡಳಿತ ಪ್ರದೇಶಗಳಿಗೆ ನಡೆಯಲಿರುವ ಚುನಾವಣಾ ಕದನದಲ್ಲಿ  226ಮಂದಿ ಮಹಿಳೆಯರು ಫೈಟ್ ಗಿಳಿದಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ, ಮೂಡುಬಿದಿರೆ. ಉಳ್ಳಾಲ, ಬಂಟ್ವಾಳ, ಪುತ್ತೂರು ಪುರಸಭೆ,  ಬೆಳ್ತಂಗಡಿ, ಸುಳ್ಯ ಪಟ್ಟಣ ಪಂಚಾಯಿತಿ  ವ್ಯಾಪ್ತಿಯಲ್ಲಿ  ಚುನಾವಣಾ  ಕದನ ಕಣದಲ್ಲಿ ರುವ ಒಟ್ಟು 677ಮಂದಿ ಅಭ್ಯರ್ಥಿಗಳ ಪೈಕಿ 226ಮಂದಿ ಮಹಿಳೆಯರು ! ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ 72ಮಂದಿ ಮಹಿಳೆಯರು ಕಣದಲ್ಲಿದ್ದರೆ, ಜೆಡಿಎಸ್ ನಿಂದ  42 ಮಂದಿ  ಸ್ತ್ರೀಯರು ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಎಸ್ ಡಿಪಿಐ […]