ಅಲ್ಲಾಹನ ಹೆಸರಿನಲ್ಲಿ ಕೊಯ್ಯಲ್ಪಟ್ಟ ಹಲಾಲ್ ಮಾಂಸವನ್ನು, ಇತರ ಧರ್ಮೀಯರಿಗೆ ತಿನ್ನಿಸಿಸುವುದು ಸರಿಯಲ್ಲ

Wednesday, March 30th, 2022
Rahim-Uchil

ಮಂಗಳೂರು : ಹಲಾಲ್ ಎನ್ನುವುದು ಇಸ್ಲಾಂನಲ್ಲಿರುವ ಆಚರಣೆ,  ಅಲ್ಲಾಹನ ಹೆಸರಿನಲ್ಲಿ  ಹಲಾಲ್ ಮಂತ್ರ ಪಠಿಸಿ ಕೊಯ್ಯಲ್ಪಟ್ಟ ಮಾಂಸವನ್ನು ಬಳಸಿ ಭಕ್ಷಣೆ ಮಾಡಬೇಕು ಎನ್ನುವುದು  ಮುಸ್ಲಿಮರಿಗೆ ಇರುವ ನಿಯಮವಾಗಿದೆ, ಹೀಗಿದ್ದ ಮೇಲೂ ಸತ್ಯವನ್ನು ಮರೆಮಾಚಿ ಇತರ ಧರ್ಮೀಯರನು ತಿನ್ನಿಸಿ ಅವರನ್ನು ಧರ್ಮಭ್ರಷ್ಟರನ್ನಾಗಿ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ ತಿಳಿಸಿದ್ದಾರೆ. ಹಲಾಲ್ ಯಾವುದೇ ಕಾರಣಕ್ಕೆ ಮುಸ್ಲಿಮೇತರರಿಗೆ ಅನ್ವಯವಾಗುವುದಿಲ್ಲ,  ಅಲ್ಲಾಹನ ಹೆಸರಿನಲ್ಲಿ ಕೊಯ್ಯಲ್ಪಟ್ಟ ಮಾಂಸವು ಒಪ್ಪಿಗೆ ಇಲ್ಲ ಎಂದಾದಲ್ಲಿ ಸ್ವ ಇಚ್ಛೆಯಿಂದ ಇದನ್ನು ವರ್ಜಿಸಿ ಮುಸ್ಲಿಮೇತರ ವ್ಯಾಪಾರಿಗಳಿಂದ […]

ಮೈಸೂರು : ಜಿಂಕೆ ಬೇಟೆಯಾಡಿ ಮಾಂಸ ಮಾರಾಟ – ಆರೋಪಿ ಪರಾರಿ

Tuesday, October 22nd, 2019
deer meat

ಮೈಸೂರು : ನಾಗರಹೊಳೆ ಉದ್ಯಾನದ ಹುಣಸೂರು ವಲಯದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಮಾಂಸ ಹಾಗೂ ತಕ್ಕಡಿಯನ್ನು ವಶಕ್ಕೆ ಪಡೆದಿದ್ದು, ಆರೋಪಿ ಪರಾರಿಯಾದ ಘಟನೆ ನಡೆದಿದೆ. ನಾಗರಹೊಳೆ ಉದ್ಯಾನದಂಚಿನ ಪಿರಿಯಾಪಟ್ಟಣ ತಾಲೂಕಿನ ಬೂತನಹಳ್ಳಿಯ ಶಿವಣ್ಣ ಅವರ ಪುತ್ರ ಅಭಿಲಾಷ್‌ ಕುಮಾರ್‌ ತಂಬಾಕು ಹದ ಮಾಡುವ ಬ್ಯಾರನ್‌ನಲ್ಲಿ ಜಿಂಕೆ ಮಾಂಸ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಹುಣಸೂರು ವಲಯದ ಆರ್‌ಎಫ್‌ಒ ಹನುಮಂತರಾಜು ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ ವೇಳೆ […]