ರಾಜಕೀಯ ತಂತ್ರಗಳ ಮೂಲಕ ಜನರನ್ನು ಮರುಳುಗೊಳಿಸುತ್ತಿರುವ ಬಿಜೆಪಿ : ಉಮ್ಮನ್‌ಚಾಂಡಿ
Tuesday, January 5th, 2016ಕುಂಬಳೆ: ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಹಾಗೂ ಮತ ನಿರಪೇಕ್ಷತೆಯನ್ನು ಉಳಿಸಿ ಬೆಳೆಸುವಲ್ಲಿ, ಜನಸಾಮಾನ್ಯರಿಗೆ ಸೌಖ್ಯ ಸಮಾಧಾನದಲ್ಲಿ ಬದುಕು ಸಾಗಿಸಲು ಅನುವು ಮಾಡಿಕೊಡುವ ಆಡಳಿತ ನೀಡಲು ಕಾಂಗ್ರೆಸ್ಸ್ ಪಕ್ಷದಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿಯವರು ಪ್ರಧಾನಿಯಾದೊಡನೆ ಜನಸಾಮಾನ್ಯರು ಅವರ ಮೇಲಿರಿಸಿದ್ದ ನಂಬಿಕೆಗಳು ಇದೀಗ ಹುಸಿಯೆಂದು ಅನಿಸತೊಡಗಿದೆಯೆಂದು ರಾಜ್ಯದ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷ ವಿ.ಎಂ ಸುಧೀರನ್ ನೇತೃತ್ವದಲ್ಲಿ ಆರಂಭಿಸಲಾದ ಜನಪಕ್ಷ ಯಾತ್ರೆಯನ್ನು ಸೋಮವಾರ ಸಂಜೆ ಕುಂಬಳೆಯಲ್ಲಿ ಪಕ್ಷದ ಧ್ವಜವನ್ನು ಸುಧೀರನ್ ರವರಿಗೆ ಹಸ್ತಾಂತರಿಸುವ ಮೂಲಕ […]