ಇತಿಹಾಸ ಪ್ರಸಿದ್ಧ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮಾರಿಪುಜೆ
Wednesday, February 23rd, 2011ಮಂಗಳೂರು : ಮಂಗಳೂರಿನ ಇತಿಹಾಸ ಪ್ರಸಿದ್ಧ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಮಹಾಪೂಜೆಯು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜರಗಿತು. ಮೊದಲ ದಿನ ರಾತ್ರಿ ಮಾರಿಯಮ್ಮ ಕ್ಷೇತ್ರದ ವಿಶೇಷ ಸಂಪ್ರದಾಯವಾದ ಹಾಲು ಉಕ್ಕಿಸುವ ಪೂಜೆಯೊಂದಿಗೆ ಆರಂಭವಾದ ಉತ್ಸವವು ಎರಡನೇ ದಿನದಂದು ಇಲ್ಲಿನ ಪರಂಪರೆಯಂತೆ ನೈವೇದ್ಯ ಬಲಿ, ರಾಶಿಪೂಜೆ, ಮಾರಿ ಉಚ್ಚಿಷ್ಠ, ಮೊದಲಾದ ಸಾಂಪ್ರದಾಯಿಕ ವಿಧಿ ವಿಧಾನದೊಂದಿಗೆ ನಡೆಯಿತು. ವರ್ಷಾವಧಿ ಮಹೋತ್ಸವಕ್ಕೆ ಫೆ.11ರಂದು ಪ್ರಸಾದ ಹಾರಿಸುವ ಮೂಲಕ ಈ ಬಾರಿಯ ಚಾಲನೆ […]