ಮಾರ್ನಿಂಗ್ ಹೋಂ ಸ್ಟೇ ದಾಳಿ : ನವೀನ್ ಸೂರಿಂಜೆ ಪ್ರಕರಣ ಹಿಂತೆಗೆತಕ್ಕೆ ನಿರ್ಧಾರ
Friday, February 1st, 2013ಮಂಗಳೂರು : ಪಡೀಲ್ ಬಳಿ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ವರದಿಗಾರ ನವೀನ್ ಸೂರಿಂಜೆಯನ್ನು ನವೆಂಬರ್ 7ರಂದು ಬಂಧಿಸಲಾಗಿದ್ದು ಇದೀಗ ನವೀನ್ ಸೂರಿಂಜೆ ವಿರುದ್ಧ ದಾಖಲಿಸಲಾದ ಪ್ರಕರಣ ಹಿಂತೆಗದುಕೊಳ್ಳಲು ಸರಕಾರ ನಿರ್ಧರಿಸಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ನವೆಂಬರ್ 7ರಂದು ನವೀನ್ ಸೂರಿಂಜೆ ಬಂಧನಕೊಳಗಾದ ಮೇಲೆ ಜಾಮೀನು ಅರಸಿ, ನ್ಯಾಯಾಲಯದ ಮೊರೆ ಹೋಗಿದ್ದರೂ, ಸ್ಥಳೀಯ ಹಾಗೂ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಪತ್ರಕರ್ತರು, ಜನಪರ ಹೋರಾಟಗಾರರು […]