ರಿಕ್ಷಾ ಚಾಲಕ, ಪಡೀಲ್ ನಿವಾಸಿ ಮುಖೇಶ್ ಮೇಲೆ ಹಲ್ಲೆ

Thursday, July 7th, 2016
Mukhesh

ಮಂಗಳೂರು: ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಪಡೀಲ್ ಭಜರಂಗದಳದ ಸದಸ್ಯನೂ ಆಗಿರುವ ಯುವಕನೋರ್ವನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ನಿನ್ನೆ ಸಂಜೆ ನಗರದ ಫೈಸಲ್‍ನಗರದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಪಡೀಲ್ ನಿವಾಸಿ ಮುಖೇಶ್ ಎಂದು ಗುರುತಿಸಲಾಗಿದೆ. ಮುಖೇಶ್ ತನ್ನ ರಿಕ್ಷಾದಲ್ಲಿ ಫೈಸಲ್‍ನಗರಕ್ಕೆ ಬಾಡಿಗೆಗೆ ತೆರಳಿದ್ದ. ಈ ವೇಳೆ ರಸ್ತೆಯಲ್ಲಿ ಶೇಖರಣೆಯಾಗಿದ್ದ ಕೆಸರು ನೀರು ರಸ್ತೆ ಬದಿ ನಿಂತಿದ್ದ ಯುವಕನೋರ್ವನ ಮೇಲೆ ಎರಚಿದೆ. ಇದನ್ನೇ ನೆಪವಾಗಿರಿಸಿದ ಸ್ಥಳೀಯ ಯುವಕರು ಮುಖೇಶ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ […]

ಕಾಸರಗೋಡಿನಲ್ಲಿ ಸ್ತ್ರೀ ಸ್ವಾಭಿಮಾನ ಯಾತ್ರೆಗೆ ಭವ್ಯ ಸ್ವಾಗತ

Wednesday, January 27th, 2016
Stree Swabhimana yatre

ಕಾಸರಗೋಡು: ಕಳೆದ 50 ವರ್ಷಗಳಿಂದ ಕೇರಳದ ಆಧ್ಯಾತ್ಮಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಕ್ಷೇತ್ರ ಸಂರಕ್ಷಣಾ ಸಮಿತಿಯು ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಸ್ತ್ರೀ ಸುರಕ್ಷೆ , ಸ್ತ್ರೀ ಸಬಲೀಕರಣ, ಕುಟುಂಬ ಭದ್ರತೆ ಇತ್ಯಾದಿಗಳನ್ನು ಗುರಿಯಾಗಿರಿಸಿಕೊಂಡು ಈ ಸ್ತ್ರೀ ಸ್ವಾಭಿಮಾನ್ ಯಾತ್ರೆಯನ್ನು ಆಯೋಜಿಸಲಾಗಿದೆ. ಅತ್ಯಂತ ದಯನೀಯ ಹಾಗೂ ಆಪತ್ತಿನಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ತ್ರೀಯರು ಬದುಕುವಂತಾಗಿದೆ ಎಂದು ಗೋವಾದ ರಾಜ್ಯಪಾಲೆ ಮೃದುಲಾ ಸಿನ್ಹಾ ಅಭಿಪ್ರಾಯ ವ್ಯಕ್ತಪಡಿಸಿದರು. ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಸುವರ್ಣ ಜಯಂತಿ ಆಚರಣೆಯ ಅಂಗವಾಗಿ ಮಾತೃಸಮಿತಿಯ ರಾಜ್ಯಾಧ್ಯಕ್ಷೆ ಪ್ರೊ.ವಿ.ಟಿ.ರಮಾ […]