ಮಸೀದಿಗಳಲ್ಲಿ ನಮಾಝ್ ಸದ್ಯಕ್ಕಿಲ್ಲ : ಮುಸ್ಲಿಂ ಸೆಂಟ್ರಲ್‌ ಕಮಿಟಿ

Sunday, June 7th, 2020
jamia masjid

ಮಂಗಳೂರು : ಮಸೀದಿಗಳನ್ನು ಜೂ. 8ರಿಂದ ತೆರೆಯಲು ಸರಕಾರ ಅವಕಾಶ ಮಾಡಿಕೊಟ್ಟರೂ ಮುಂದೆ ಮಸೀದಿಗೆ ಸಂಬಂಧಿಸಿದ ನಿರ್ದಿಷ್ಟ ಮಾರ್ಗಸೂಚಿಗ ಳನ್ನು ಪ್ರಕಟಿಸಿದ ಬಳಿಕವೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಅಧ್ಯಕ್ಷ ಅಲ್‌ಹಾಜ್‌ ಕೆ.ಎಸ್‌. ಮುಹಮದ್‌ ಮಸೂದ್‌ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್‌ ಮಲ್ಪೆ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಆದರೆ ಮಂಗಳೂರು ಬಂದರ್‌ನ ಝೀನತ್‌ ಭಕ್ಷ್ ಕೇಂದ್ರ ಜುಮ್ಮಾ ಮಸೀದಿಯ […]

ಡಿ. 29 ರಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಸ್ವರ್ಣ ಮಹೋತ್ಸವ ಆಚರಣೆ

Friday, December 28th, 2018
muslim-2

ಮಂಗಳೂರು: ಸಮಾಜದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬಾಳಬೇಕು ಎಂಬ ಉದ್ದೇಶದಿಂದ 1968ರಲ್ಲಿ ಸ್ಥಾಪಿಸಲ್ಪಟ್ಟ ದ.ಕ‌ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯು 50 ವರ್ಷಗಳನ್ನು ಪೂರೈಸಿದ್ದು, ಈ 50 ವರ್ಷಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. 1968ರ ಕೋಮುಗಲಭೆಯ ನಂತರ ಸಮಾಜದಲ್ಲಿ ಎಲ್ಲಾ ಮತದವರು ಶಾಂತಿಯುತವಾಗಿ ಬಾಳುವಂತಾಗಬೇಕೆಂದು ಈ ಸಂಘಟನೆಯನ್ನು‌ ಅಂದಿನ ಹಿರಿಯರು ಸ್ಥಾಪಿಸಿದ್ದರು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ. ಎಸ್. ಮೊಹಮ್ಮದ್ ಮಸೂದ್ ಹೇಳಿದರು. ಆ ಬಳಿಕ ನಡೆದ ಬಾಬರಿ […]

ಬಕ್ರೀದ್‌ ವೇಳೆ ಅಹಿತಕರ ಘಟನೆ ನಡೆಯದಂತೆ ಮುಸ್ಲಿಂ ಸಮುದಾಯದ ಮನವಿ

Friday, September 9th, 2016
Bakrid

ಮಂಗಳೂರು: ಸೆಪ್ಟಂಬರ್ 12 ರಂದು ಬಕ್ರೀದ್ ಆಚರಣೆ ನಡೆಯುತ್ತಿದ್ದು, ಬಳಿಕ ಮೂರು ದಿನಗಳ ಖುರ್ಬಾನಿ ಕೊಡುವುದು ಇಸ್ಲಾಂ ಧರ್ಮದಲ್ಲಿ ನಡೆದುಕೊಂಡ ಬಂದ ವಿಧಿ. ಈ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಮಾಡುವಂತೆ ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗವು ಐಜಿಪಿ, ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ. ಜೊತೆಗೆ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮುಸ್ಲಿಮರಿಗೆ ಮನವಿ ಮುಸ್ಲಿಂ ಸೆಂಟ್ರಲ್ ಕಮಿಟಿ […]