ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಕಾವೂರು ಪೊಲೀಸರಿಂದ ಬಂಧನ

Tuesday, March 3rd, 2020
mohammad

ಮಂಗಳೂರು : ತಾಲೂಕಿನ ಪಡುಶೆಡ್ಡೆ ಗ್ರಾಮದ ಮಂಜಲಪಾದೆ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮೂಡುಶೆಡ್ಡೆಯ ಪಿಲಿಕುಳ ನಿವಾಸಿ ಮುಹಮ್ಮದ್ ಮುಸ್ತಫಾ (22) ಬಂಧಿತ ವ್ಯಕ್ತಿ. ಬಂಧಿತನಿಂದ 26 ಸಾವಿರ ರೂ. ಮೌಲ್ಯದ 1.1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸ್ ಕಾರ್ಯಾಚರಣೆ ಸಂದರ್ಭ ಮತ್ತೋರ್ವ ಆರೋಪಿ ವಾಮಂಜೂರಿನ ಮಹಮ್ಮದ್ ರಾಯಿಫ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತ ಆರೋಪಿ ಮುಹಮ್ಮದ್ ಮುಸ್ತಫಾ ವಿರುದ್ಧ ಉಳ್ಳಾಲ ಮತ್ತು ಬರ್ಕೆ […]