ಸಮೃದ್ಧ ಮೀನುಗಾರಿಕೆಗೆ ಹಾರೈಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ

Tuesday, August 20th, 2024
samudra-pooje

ಮಂಗಳೂರು: ಮೀನುಗಾರರ ಶ್ರೇಯೋಭಿವೃದ್ದಿಗಾಗಿ ತಣ್ಣೀರುಬಾವಿ ಮೊಗವೀರ ಮಹಾಸಭಾ (ರಿ) ಇದರ ವತಿಯಿಂದ ಚಿತ್ರಾಪುರ ಕಡಲ ಕಿನಾರೆಯಲ್ಲಿ ಆ. 19ರಂದು ಸಮುದ್ರ ಪೂಜೆ ನಡೆಯಿತು. ಸಮುದ್ರರಾಜನಿಗೆ ಹಾಲು, ಫಲ ಅರ್ಪಿಸಿ, ಸಮುದ್ರ ಪೂಜೆಯಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ ” ಕರಾವಳಿಯಲ್ಲಿ ನೂಲ ಹುಣ್ಣಿಮೆಯಂದು ಸಮುದ್ರರಾಜನಿಗೆ ಪೂಜೆ ಸಲ್ಲಿಸುವುದು ಸಾಮಾನ್ಯ ಪ್ರತೀತಿ. ಹೊಸಋತುವಿನ ಮೀನುಗಾರಿಕೆಗೆ ತೆರಳುವ ಪ್ರತಿ ಮೀನುಗಾರರನ್ನು ಯಾವುದೇ ಪ್ರಾಣಾಪಾಯ ಇಲ್ಲದಂತೆ ಸಮುದ್ರರಾಜ ರಕ್ಷಿಸಲಿ, ಮತ್ಸ್ಯ ಸಮೃದ್ಧಿ ಉಂಟಾಗಲಿ” […]