ಪಣಂಬೂರ್ ಬೀಚ್‌‌ನಲ್ಲಿ ಬೋಟ್ ಪಲ್ಟಿ: ಎರಡೂವರೆ ವರ್ಷದ ಮಗು ನೀರುಪಾಲು

Thursday, October 6th, 2016
panamburu-beach

ಮಂಗಳೂರು: ಪಣಂಬೂರ್ ಬೀಚ್‌‌ನಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿ ಪ್ರಯಾಣಿಕ ಬೋಟ್ ಪಲ್ಟಿಯಾದ ಪರಿಣಾಮ ಎರಡೂವರೆ ವರ್ಷದ ಮಗು ನೀರುಪಾಲಾಗಿದ್ದಾನೆ ಎನ್ನಲಾಗಿದೆ. ಮೊಹಮ್ಮದ್ ಸದಾನ್ ನೀರುಪಾಲಾದ ಮಗು ಎಂದು ತಿಳಿದುಬಂದಿದೆ. ಬೋಟಿನಲ್ಲಿದ್ದ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ದುಬೈ ಉದ್ಯಮಿ ಶಮಿತ್ ಕುಟುಂಬ ಬೋಟಿನಲ್ಲಿತ್ತು. ಶಮಿತ್ ಕೊಣಾಜೆಯ ನಾಟೆಕಲ್ ನಿವಾಸಿಯಾಗಿದ್ದಾರೆ. ಶಮಿತ್ ಪುತ್ರ ಮೊಹಮ್ಮದ್ ಸಮುದ್ರಪಾಲಾಗಿದ್ದಾನೆ. ಉಳಿದವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ ಎನ್ನಲಾಗಿದೆ. ಮಂಗಳೂರಿನ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀಚ್ ಪ್ರವಾಸಿಗರ ಮೋಜಿಗಾಗಿ […]