ಯಕ್ಷಸಿರಿ ಪ್ರಶಸ್ತಿಗೆ ದಿವಾಕರ್ ದಾಸ್ ಕಾವಳಕಟ್ಟೆ ಆಯ್ಕೆ

Saturday, September 14th, 2024
Diwakar

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ. ಪ್ರತಿಷ್ಠಿತ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ತೆಂಕುತಿಟ್ಟಿನ ಪ್ರಸಾಧನ ಕಲಾವಿದರು ಮತ್ತು ವೇಷಧಾರಿಯಾದ ದಿವಾಕರ್ ದಾಸ್ ಕಾವಳಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಶನಿವಾರ(ಸೆ.14) ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು. ನವೆಂಬರ್ ತಿಂಗಳಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಿಗೆ ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು […]

’ಕಲ್ಕೂರ ಸಾಂಸ್ಕೃತಿಕ ಸಿರಿ – ಯಕ್ಷಸಿರಿ ಪ್ರಶಸ್ತಿ’ ಪ್ರದಾನ

Wednesday, April 24th, 2019
Kalkura

ಮಂಗಳೂರು :  ಮಹಾರಾಷ್ಟ್ರದ ಸಾಂಗ್ಲಿ-ಮೀರಾಜ್ ತುಳುಭವನ ನಿರ್ಮಾಣದ ರೂವಾರಿಗಳಲ್ಲೋರ್ವರಾಗಿ ತುಳು- ಕನ್ನಡ ಸಂಸ್ಕೃತಿಯನ್ನು ಹೊರರಾಜ್ಯಗಳಲ್ಲಿ ಪಸರಿಸಿದ ಹಿರಿಯ ಸಂಘಟಕ ಶ್ರೀನಿವಾಸ ಮಂಕುಡೆಯವರಿಗೆ ’ಕಲ್ಕೂರ ಸಾಂಸ್ಕೃತಿಕ ಸಿರಿ’ ಹಾಗೂ ಹಿರಿಯ ಹವ್ಯಾಸಿ ಯಕ್ಷಗಾನಕಲಾವಿದಉಡುಪಿ ತಾಲೂಕಿನ ಸಾಂತೂರುಜಗನ್ನಾಥ ಶೆಟ್ಟಿಯವರಿಗೆ’ ಕಲ್ಕೂರಯಕ್ಷ ಸಿರಿ’ ಪ್ರಶಸ್ತಿ ನೀಡುವ ಮೂಲಕ ಅಭಿನಂದಿಸಲಾಯಿತು. ಇತ್ತೀಚೆಗೆ ನಗರದಕದ್ರಿ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿಕಲ್ಕೂರ ಪ್ರತಿಷ್ಠಾನದ ವತಿಯಿಂದಏರ್ಪಡಿಸಲಾಗಿದ್ದ ವಿಷುಕಣಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಸನ್ಮಾನಿತರನ್ನು ಅಭಿನಂದಿಸಿದರು. ಕರ್ಣಾಟಕ ಬ್ಯಾಂಕಿನಅಧ್ಯಕ್ಷರಾದ ಶ್ರೀ ಜಯರಾಮ ಭಟ್, ಶಾರದಾ ಸಮೂಹ […]