ಕೊರೊನಾ ಸೋಂಕಿತನಿಗೆ ಯುನಿಟಿ ಆಸ್ಪತ್ರೆ ನೀಡಿದ ಬಿಲ್ 2.97,518 ರೂ‌. ಆದರೆ ಪಿಪಿಇ ಕಿಟ್ ಉಚಿತ !

Friday, September 4th, 2020
ppeKit

ಮಂಗಳೂರು: ನಗರದ ಯುನಿಟಿ ಆಸ್ಪತ್ರೆ ಕೊರೊನಾ ಸೋಂಕಿತರೋರ್ವರಿಗೆ  11 ದಿನಗಳ ಕಾಲ ಚಿಕಿತ್ಸೆ ನೀಡಿ 2.97,518 ರೂ‌. ಬಿಲ್ ನೀಡಿದೆ. ಆದರೆ ಪಿಪಿಇ ಕಿಟ್ ಉಚಿತ  ಎಂದು 45,110 ರೂ‌. ರಿಯಾಯಿತಿ ನೀಡಿದ ಬಿಲ್ ಹಾಕಿ ಮತ್ತೆ ವಿನಾಯಿತಿ ಎಂದು ತೋರಿಸಿದೆ. ಸರ್ಕಾರದ ನಿಯಮವನ್ನೂ ಮೀರಿ ಖಾಸಗಿ ಆಸ್ಪತ್ರೆ ಗಳು ಸೋಂಕಿತರಿಂದ ವಸೂಲಿ ಮಾಡಲು ಇದು ಸುವರ್ಣಾವಕಾಶ ಎಂಬಂತೆ ವರ್ತಿಸಲಾರಂಭಿಸಿದೆ, ದೇಶದಲ್ಲಿ ಸಾಂಕ್ರಾಮಿಕ ರೋಗಗಳು ಬಂದಾಗ ಉಚಿತ ಚಿಕಿತ್ಸೆ ನೀಡಿ ಸರಕಾರದೊಂದಿಗೆ ಕೈಜೋಡಿಸಬೇಕಾದ ಖಾಸಗಿ ಆಸ್ಪತ್ರೆಗಳು, ಇದೆ ಸದಾವಕಾಶ ಎಂದು ರೋಗಿಗಳಿಂದ ದೋಚಲು ಆರಂಭಿಸಿದೆ. ಸರ್ಕಾರದ ನಿಯಮದಂತೆ ಕೊರೊನಾ ಸೋಂಕಿತರಿಗೆ […]

ವಿಷ ಸೇವಿಸಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮತ್ತೆ ಆತ್ಮಹತ್ಯೆಗೆ ಯತ್ನ !

Friday, September 21st, 2018
hospital

ಮಂಗಳೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಂಗಳೂರಿನ ಅತ್ತಾವರದ ನವೀನ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಸೆಪ್ಟೆಂಬರ್ 17 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈತನನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಈತ ಇಂದು‌‌ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಮತ್ತೆ ಹಾರಿ‌ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಸ್ಪತ್ರೆಯ ಕಟ್ಟಡದಿಂದ ಹಾರಿದ ಈತನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕಿರುಕುಳ ತಾಳಲಾರದೆ ಯುನಿಟಿ ಆಸ್ಪತ್ರೆ ಉದ್ಯೋಗಿ ನೇಣು ಬಿಗಿದು ಆತ್ಮಹತ್ಯೆ

Wednesday, September 13th, 2017
unity hospital

ಮಂಗಳೂರು : ಆಸ್ಪತ್ರೆಯ ಆಡಳಿತ ಮಂಡಳಿ ನಿರಂತರ ಕಿರುಕುಳ ನೀಡುತಿದ್ದರ ಪರಿಣಾಮ ಯುನಿಟಿ ಆಸ್ಪತ್ರೆ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದ ಸ್ಪೂರ್ತಿ ಆಸ್ಪತ್ರೆಯ ಇನ್ಷೂರೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸೊಮೇಶ್ವರದ ಉಚ್ಚಿಲ ನಿವಾಸಿ ಸ್ಪೂರ್ತಿ (21 )ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕಳೆದ ಒಂದುವರೆ ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಸ್ಪೂರ್ತಿ ಗೆ ಆಸ್ಪತ್ರೆಯಲ್ಲಿ ಕಿರುಕುಳ ನೀಡುತ್ತಿದ್ದರು. ಆಸ್ಪತ್ರೆಯ ಆಡಳಿತ ಮಂಡಳಿ ನಿರಂತರ ಕಿರುಕುಳ ನೀಡುತಿದ್ದರ ಬಗ್ಗೆ ಸ್ಪೂರ್ತಿ […]