ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ತಬ್ಧ
Thursday, November 30th, 2017ಕಿನ್ನಿಗೋಳಿ: ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ 2010ರಲ್ಲಿ ಆರಂಭವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುಂಟುತ್ತ ಸಾಗಿದ್ದು, ಜೂನ್ ತಿಂಗಳಿನಿಂದ ಘಟಕವೂ ಸ್ತಬ್ಧಗೊಂಡಿದೆ. ಪೊದಗಳಿಂದ ಕೂಡಿರುವ ನೀರಿನ ಟ್ಯಾಂಕ್ ಪ್ರದೇಶ ಹದಿನೆಂಟು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ 16.80 ಕೋಟಿ ರೂ. ವೆಚ್ಚದ ಈ ಯೋಜನೆ ಏಳು ವರ್ಷ ಆಗುತ್ತ ಬಂದರೂ ಪೂರ್ಣವಾಗಿಲ್ಲ. ಮಂಗಳೂರು ತಾಲೂಕಿನ ಮೂಲ್ಕಿ ವಿಭಾಗದಲ್ಲಿ ಹರಿಯುವ ಶಾಂಭವಿ ನದಿಗೆ ಬಳಕುಂಜೆ ಗ್ರಾಮದ ಬಳಿ ಜಾಕ್ವೆಲ್ ನಿರ್ಮಿಸಿ ಕೊಲ್ಲೂರು ಪದವಿನಲ್ಲಿ ಟ್ಯಾಂಕ್ ರಚಿಸಿ ಗುರುತ್ವಾಕರ್ಷಣೆಯ ಶಕ್ತಿಯಿಂದ […]