ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯಾಗಿಸಿದ ಸಂಬಂಧಿಕನ ಬಂಧನ

Thursday, November 11th, 2021
Ramesha

ಕಡಬ:  ಕೋಡಿಂಬಾಳ ಗ್ರಾಮದಲ್ಲಿ  ಅಪ್ರಾಪ್ತೆ  ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಾಲಕಿಯ ಸಂಬಂಧಿಕನನ್ನು ಪೊಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಕೋಡಿಂಬಾಳ ಗ್ರಾಮದ ಪಾಜೋವು ಸಮೀಪದ ರಮೇಶ್ ಎಂಬಾತ ತನ್ನ ಸಂಬಂಧಿಕರಾಗಿರುವ ಅಪ್ರಾಪ್ತೆಯನ್ನು ಕಳೆದ ಒಂದೂವರೆ ವರ್ಷದಿಂದ ಲೈಂಗಿಕವಾಗಿ ಬಳಸಿಕೊಂಡಿದ್ದು, ಇದೀಗ ಆಕೆ ಗರ್ಭವತಿಯಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ. 2020ರ ಏಪ್ರಿಲ್ ತಿಂಗಳಿನಿಂದ ರಮೇಶ್ ಆಗಾಗ ಬಾಲಕಿಯ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಗರ್ಭವತಿಯಾದ ಬಗ್ಗೆ ಬಾಲಕಿ ಯಾರಿಗೂ ಮಾಹಿತಿ ನೀಡಿರಲಿಲ್ಲ. ಆಕೆ ಅಸ್ವಸ್ಥಗೊಂಡಿದ್ದು, ಈ ಸಂಬಂಧ […]

ಬೆಂಗಳೂರಿನ ಕಾಂತರಾಜ್ ಮತ್ತು ತಂಡದವರಿಂದ ಪುಷ್ಪಾಲಂಕಾರ ಸೇವೆ

Thursday, December 6th, 2018
decoration

ಧರ್ಮಸ್ಥಳ: ಬೆಂಗಳೂರಿನ ಕಾಂತರಾಜ್ ಮತ್ತು ಬಳಗದವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಗುರುವಾರ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಹೆಗ್ಗಡೆಯವರ ನಿವಾಸ (ಬೀಡು) ಹಾಗೂ ದೇವಸ್ಥಾನದ ಒಳಾಂಗಣವನ್ನು ಪುಷ್ಪಾಲಂಕಾರ ಮಾಡಿ ಸೇವೆಯಿಂದ ಧನ್ಯತೆಯನ್ನು ಹೊಂದಿದರು. ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಿವಿಧ ಅಲಂಕಾರಿಕ ಹೂ ಗಳನ್ನು ಬೆಂಗಳೂರಿನಿಂದ ತಂದು ಗುರುವಾರ ಅಲಂಕಾರ ಸೇವೆಯನ್ನು ಸಮರ್ಪಿಸಿದರು. ಇವರ ಜೊತೆ ರವಿ, ರಮೇಶ್, ಮತ್ತು ಮಂಜು ಹಾಗೂ ಇತರ ಭಕ್ತಾದಿಗಳು ಸಹಕರಿಸಿದರು.

ಅಕ್ರಮ ಪಿಸ್ತೂಲ್​​​ ಹೊಂದಿದ್ದ ಆರೋಪಿಯ ಬಂಧನ

Wednesday, November 28th, 2018
pistool

ಕಲಬುರಗಿ: ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ಆರೋಪಿಯನ್ನ ಮಾದನ ಹಿಪ್ಪರಗಾ ಪೊಲೀಸರು ಬಂಧಿಸಿದ್ದಾರೆ. ಮಾದನ ಹಿಪ್ಪರಗಾ ಗ್ರಾಮದ ರಾಜಕುಮಾರ ಸಾವರೆ ಬಂಧಿತ ಆರೋಪಿ. ಬಂಧಿತನಿಂದ ಒಂದು ನಾಡ ಪಿಸ್ತೂಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಶಾಂತಪ್ಪ ಮನೆ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದ ಹೊಲದಲ್ಲಿ ಅಕ್ರಮ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರಮೇಶ್ ಬಂಧಿತ […]

50 ಸಾವಿರ ಹಣಕ್ಕಾಗಿ ಕಿಡ್ನಾಪ್​ ಮಾಡಿದ್ದ ಐವರ ಆರೋಪಿಗಳ ಬಂಧನ

Friday, November 23rd, 2018
bengaluru

ಬೆಂಗಳೂರು: 50 ಸಾವಿರ ರೂ.ಗಾಗಿ ಯುವಕನೊಬ್ಬನನ್ನು ಕಿಡ್ನಾಪ್ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಬೊಮ್ಮನಹಳ್ಳಿ‌ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃಷ್ಣನಾಯಕ್, ಯಶವಂತ್, ರಮೇಶ್, ಶಶಿಕುಮಾರ್ ಹಾಗೂ ಅರುಣ್ ಬಂಧಿತ ಆರೋಪಿಗಳು. ಬಂಧಿತರಿಂದ 3.65 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ದರೋಡೆ, ಸುಲಿಗೆ ಸೇರಿದಂತೆ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ 8 ಪ್ರಕರಣಗಳು ಬೆಳಕಿಗೆ ಬಂದಿವೆ. ಮೋಜು‌‌‌ ಜೀವನ ನಡೆಸುವುದೇ ಕಾಯಕ ಮಾಡಿಕೊಂಡಿದ್ದ ಆರೋಪಿಗಳು ಕಾರು, ಆಟೋ ಮೂಲಕ ರಾತ್ರಿ ವೇಳೆ ಒಂಟಿಯಾಗಿ ಒಡಾಡುವವರನ್ನು ಗುರಿಯಾಗಿಸಿಕೊಂಡು […]

ಬಿಸಿ ನೀರಿಗೆ ಬಿದ್ದು ಆರು ವರ್ಷದ ಬಾಲಕಿ ಸಾವು..!

Tuesday, November 20th, 2018
died

ಮಂಗಳೂರು: ಬಿಸಿ ನೀರಿಗೆ ಬಿದ್ದು ಆರು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಪುತ್ತೂರು ತಾಲೂಕಿನ ನರಿಮೊಗರುವಿನಲ್ಲಿ‌ ನಡೆದಿದೆ. ತಾಲೂಕಿನ ಕೆಮ್ಮಿಂಜೆ ಬೆದ್ರಾಳ ನಿವಾಸಿ ರಮೇಶ್ ಎಂಬುವರ ಪುತ್ರಿ ತನ್ವಿ(6) ಮೃತಪಟ್ಟ ಬಾಲಕಿ. ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಬಿಸಿ ನೀರು ಮೈ ಮೇಲೆ ಬಿದ್ದು ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ನರಿಮೊಗರು ಸಾಂದೀಪಿನಿ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದಳು.

ಶಿಥಿಲಗೊಂಡ ನೀರಿನ ಟ್ಯಾಂಕ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ

Wednesday, July 18th, 2018
protest

ಮಂಗಳೂರು: ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಸೈಟ್ ಬಳಿ ದಲಿತರ ಕಾಲನಿಯಲ್ಲಿರುವ ಓವರ್‌ಹೆಡೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಇದನ್ನು ತೆರವುಗೊಳಿಸಲು ಆಗ್ರಹಿಸಿ ಮಂಗಳವಾರ ಕೊರಗರ ದ.ಕ. ಜಿಲ್ಲಾ ಸಮಿತಿ ವತಿಯಿಂದ ಗಂಜಿಮಠ ಗ್ರಾಪಂ ಆವರಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಯಿತು. ಕೊನೆಗೆ ಜಿ.ಪಂ. ಸದಸ್ಯರು ಹಾಗೂ ಐಟಿಡಿಪಿ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಓವರ್ ಹೆಡೆಡ್ ಟ್ಯಾಂಕ್ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಅದು ಅಲ್ಲಿನ ನಿವಾಸಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಟ್ಯಾಂಕನ್ನು ತೆರವುಗೊಳಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ […]

ಸಿಎಂ ಜನತಾ ದರ್ಶನ… ವಿಕಲಚೇತನನಿಗೆ ಸ್ಪಾಟಲ್ಲೇ ನೌಕರಿ ಭರವಸೆ ನೀಡಿದ್ರು ಹೆಚ್‌ಡಿಕೆ

Monday, June 4th, 2018
kumarswamy

ಬೆಂಗಳೂರು: ಜನತಾ ದರ್ಶನಕ್ಕೆ ಬರುವ ಜನರಿಂದ ಮಾಹಿತಿ ಪಡೆಯಲು ಒಂದು ತಂಡ ರಚನೆಯಾಗಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜನತಾ ದರ್ಶನಕ್ಕಾಗಿ ತಂಡ ರಚಿಸಿದ್ದು, ಇನ್ನು ಮುಂದೆ ಈ ತಂಡ ಜನತಾ ದರ್ಶನಕ್ಕೆ ಬರುವ ಜನರಿಂದ ಮಾಹಿತಿ ಪಡೆಯಲಿದೆ. ಸಿಎಂ ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣ ಆವರಣದಲ್ಲಿ ಇಂದು ಜನತಾ ದರ್ಶನದ ತಂಡ ರಚಿಸಿದ್ದು, ಸಮಸ್ಯೆ ಹೇಳಿಕೊಂಡು ಬರುವವರ ಮಾಹಿತಿ ಪಡೆಯುವುದು ಈ ತಂಡದ ಕೆಲಸವಾಗಿದೆ. ಸಿಎಂ ಜನತಾ ದರ್ಶನಕ್ಕೂ ಮುನ್ನ ಸಮಸ್ಯೆ ಏನು? ಯಾವ ಊರು? ಇನ್ನಿತರ […]

ಗೋಕಾಕ್‌ನಲ್ಲಿ ಅಮಿತ್‌ ಶಾ ಭರ್ಜರಿ ರೋಡ್‌ ಶೋ

Friday, April 13th, 2018
amit-shah

ಚಿಕ್ಕೋಡಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಸಚಿವ ರಮೇಶ್‌ ಜಾರಕಿಹೊಳಿ ಕ್ಷೇತ್ರದಲ್ಲಿ ಇಂದು ಕೇಸರಿ ಪಡೆ ಭರ್ಜರಿ ರೋಡ್‌ ಶೋ ನಡೆಸಿ ಶಕ್ತಿ ಪ್ರದರ್ಶಿಸಿತು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ತೆರೆದ ವಾಹನದಲ್ಲಿ ಅಮಿತ್ ಶಾ ಮೆರವಣಿಗೆ ನಡೆಸಿದರು. ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಶಾಗೆ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ಮುಖಂಡರು ಸಾಥ್ ನೀಡಿದರು. ಗೋಕಾಕ್‌ ನಗರ ಇಂದು ಕೇಸರಿಮಯವಾಗಿತ್ತು. ತುಂತುರು ಮಳೆಯನ್ನೂ ಲೆಕ್ಕಿಸದೆ ಬಿಜೆಪಿ ಕಾರ್ಯಕರ್ತರು ಹುರುಪಿನಿಂದ ರೋಡ್‌ ಶೋನಲ್ಲಿ ಭಾಗಿಯಾಗಿದ್ದರು. […]

ಮಸಾಜ್ ನೆಪದಲ್ಲಿ ಹನಿಟ್ರ್ಯಾಪ್… ಮಂಗಳೂರಲ್ಲಿ ಖತರ್ನಾಕ್‌ ಗ್ಯಾಂಗ್‌ ಅಂದರ್‌!

Friday, March 23rd, 2018
arrested

ಮಂಗಳೂರು: ನಗರದ ಮೇರಿಹಿಲ್‌ನ ಬಾಡಿಗೆ ಮನೆಯೊಂದರಲ್ಲಿ ಮಸಾಜ್ ಹೆಸರಲ್ಲಿ ಹನಿಟ್ರ್ಯಾಪ್ ಮಾಡಿ ವ್ಯಕ್ತಿವೋರ್ವನನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರವಿ ಗೌಡ (42), ಮಂಗಳೂರು ಜೈಲ್ ರಸ್ತೆ ಮಿಷನ್ ಕಂಪೌಂಡ್‌ನ ಪ್ರೀತೇಶ್ (36), ಮಂಗಳೂರು ಕೊಡಕ್ಕಲ್ ಪಡೀಲ್‌ನ ರಮೇಶ್ (35) ಎಂದು ಗುರುತಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಗರದ ವ್ಯಕ್ತಿವೋರ್ವನಿಗೆ ಮಸಾಜ್ ಮಾಡುವ ನೆಪದಲ್ಲಿ ಬಾಡಿಗೆ ಮನೆವೊಂದಕ್ಕೆ ಕರೆಯಿಸಿಕೊಂಡು ನಂತರ ಮನೆಗೆ ಹೋದ […]

ದೇಶದ ಉನ್ನತ್ತಿಗೆ ವಿಜ್ಞಾನ ತಂತ್ರಜ್ಞಾನ ಅಗತ್ಯ : ಬಿ.ಆರ್. ಗುರುಪ್ರಸಾದ್

Friday, March 2nd, 2018
guruprasad

ಮಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ಜನರಿಗೆ ಅರಿವು ನೀಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ದೇಶದ ಅಭಿವೃದ್ಧಿಗೆ ಇದು ಅತ್ಯಗತ್ಯ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿ ಬಿ.ಆರ್. ಗುರುಪ್ರಸಾದ್ ಹೇಳಿದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೊ ಸೊಸೈಟಿ ಮತ್ತು ಪಿಲಿಕುಳ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ನಗರದ ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವು ಮುಂದಿನ ಮನುಕುಲಕ್ಕೆ ದೊರೆಯುವಂತಾಗಬೇಕು. […]