ರಾಜ್ಯದ ಜನರ ಆಶೀರ್ವಾದದಿಂದ ದರ್ಶನ್ ಆರೋಗ್ಯವಾಗಿದ್ದಾರೆ: ರವಿಶಂಕರ್
Friday, September 28th, 2018ಮೈಸೂರು: ಚಾಮುಂಡೇಶ್ವರಿ ತಾಯಿ ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ದರ್ಶನ್ ಆರೋಗ್ಯವಾಗಿದ್ದಾರೆ. ಅವರನ್ನು ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾಜ್೯ ಮಾಡಲಾಗುವುದು ಎಂದು ನಟ ರವಿಶಂಕರ್ ಹೇಳಿದ್ದಾರೆ. ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಆರೋಗ್ಯ ವಿಚಾರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಅವರೊಂದಿಗೆ ಮಾತನಾಡಿದ್ದೇನೆ. ಅವರ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದೆ. ಅಭಿಮಾನಿಗಳ ಹಾಗೂ ದೇವರ ಆಶೀರ್ವಾದದಿಂದ ಹೆಚ್ಚಿನ ಅನಾಹುತವಾಗಿಲ್ಲವೆಂದು ಮಾತನಾಡಿದರು ಎಂದು ತಿಳಿಸಿದರು.