‘ಆಳ್ವಾಸ್’ ನಲ್ಲಿ ಸ್ನೇಹ ಕೂಟ ಕಾರ್ಯಕ್ರಮ
Wednesday, October 3rd, 2018ಮೂಡಬಿದಿರೆ: ಕಾಲೇಜಿನ ಬೆಳವಣಿಗೆಯಲ್ಲಿ ಉಪನ್ಯಾಸಕರ ಪಾತ್ರ ಪ್ರಮುಖವಾಗಿದ್ದು, ಹೊಸ ಯೋಜನೆಗಳನ್ನು ನಿಭಾಯಿಸುವಲ್ಲಿ ಜವಾಬ್ದಾರಿಯುತ ನಡೆ ಅಗತ್ಯ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ “ಸ್ನೇಹ ಕೂಟ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಯ ವ್ಯಕ್ತಿತ್ವ ತಿಳಿದುಕೊಳ್ಳಲು ಪ್ರತಿಭೆಗಳು ಸಹಕಾರಿಯಾಗಿವೆ. ವರ್ಷವಿಡೀ ವಿದ್ಯಾರ್ಥಿಗಳಿಗೆ ಕಲಿಸುತ್ತಾ, ವೃತ್ತಿನಿರತರಾದ ಉಪನ್ಯಾಸಕರಿಗೆ ತಮ್ಮಲ್ಲಿದ್ದ ಪ್ರತಿಭೆಗಳನ್ನು ಹೊರಹಾಕಲು ಹಾಗೂ ಆತ್ಮೀಯತೆಯಿಂದ ಒಬ್ಬರನ್ನೊಬ್ಬರು ಬೆರೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. […]