ರಾಯಿ ಶ್ರೀ ಕ್ಷೇತ್ರ ಬದನಡಿ: 20ರಂದು ವಾರ್ಷಿಕ ಷಷ್ಠಿ ಮಹೋತ್ಸವ ಸಂಭ್ರಮ

Wednesday, December 16th, 2020
badinade

ಬಂಟ್ವಾಳ:  ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಇದೇ ೨೦ರಂದು ಸಂಭ್ರಮ ಸಡಗರದಿಂದ ನಡೆಯಲಿದೆ. ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ತಂತ್ರಿ ಮಾರ್ಗದರ್ಶನದಲ್ಲಿ ಇದೇ 18ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನ ಆರಂಭಗೊಳ್ಳಲಿದೆ. ಡಿ. 19ರಂದು ಳಿಗ್ಗೆ 9ಗಂಟೆಗೆ ಬ್ರಹ್ಮಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಗಂಟೆ 7ರಿಂದ ರಂಗಪೂಜೆ ಮತ್ತು ಪಂಚಮಿ ಉತ್ಸವ ನಡೆಯಲಿದೆ. ಡಿ.20ರಂದು ಬೆಳಿಗ್ಗೆ 7ಗಂಟೆಗೆ […]

ರಾಯಿ: ಶ್ರೀ ಕೊರಗಜ್ಜ ಕ್ಷೇತ್ರ ಚಂಡಿಕಾಯಾಗ ಪೂರ್ಣಾಹುತಿ, ದೇವಿ ಆರಾಧನೆಯಿಂದ ಸಮೃದ್ಧಿ ಸಾಧ್ಯ: ಆನಂದ ಗುರೂಜಿ

Tuesday, December 15th, 2020
kaitrody

ಬಂಟ್ವಾಳ: ಜಗತ್ತಿಗೆ ಮಹಾಮಾರಿಯಾಗಿ ಕಾಡಿದ ಕೊರೋನದಂತಹ ಸಂಕಷ್ಟಗಳನ್ನು ದೂರಗೊಳಿಸಿ ಜನತೆಗೆ ಬದುಕಿನಲ್ಲಿ ಸಮೃದ್ಧಿ ಕಾಣಲು ದೇವಿ ಆರಾಧನೆಯಿಂದ ಸಾಧ್ಯವಿದೆ ಎಂದು ಝೀ ಕನ್ನಡ ಮಹರ್ಷಿ ವಾಣಿ ಖ್ಯಾತಿಯ ಆನಂದ ಗುರೂಜಿ ಹೇಳಿದ್ದಾರೆ. ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟ ಸ್ರ್ ಶ್ರೀ ಮಂತ್ರದೇವತೆ ಕೊರಗಜ್ಜ ಕ್ಷೇತ್ರದಲ್ಲಿ (ಡಿ.15 ರಂದು) ಮಂಗಳವಾರ ನಡೆದ ಚಂಡಿಕಾಯಾಗಕ್ಕೆ ಪೂರ್ಣಾಹುತಿ ನೆರವೇರಿಸಿದ ಬಳಿಕ ಅವರು ಆಶೀರ್ವಚನ ನೀಡಿದರು. ಕೊರಗಜ್ಜ ದೈವ ಭಕ್ತರ ಸಂಕಷ್ಟ ಕಳೆಯಲು ಭಕ್ತಿಗೆ ತ್ವರಿತವಾಗಿ ಒಲಿಯುತ್ತಾನೆ ಎಂದರು. ಕಟೀಲು ಕ್ಷೇತ್ರದ […]

ರಾಯಿ : ನಾಯಿ ಹಿಡಿಯಲು ಬಂದಿದ್ದ ಚಿರತೆ ಬಾವಿಗೆ

Monday, September 30th, 2019
chirate

ಬಂಟ್ವಾಳ : ತಾಲೂಕಿನ ರಾಯಿ ಸಮೀಪದ ಬಲ್ಲಾಳ್ ಬೆಟ್ಟು ನಿವಾಸಿ ಮೋನಪ್ಪ ಬಂಗೇರ ಎಂಬವರ ಮನೆ ಅಂಗಳದಲ್ಲಿದ್ದ ಎರಡು ಸಾಕು ನಾಯಿಗಳನ್ನು ಹಿಡಿಯಲು ಬಂದಿದ್ದ ಚಿರತೆಯೊಂದು ಮನೆಯ ಬಾವಿಗೆ ಬಿದ್ದ ಘಟನೆ ಸೆ.30 ರ ಸೋಮವಾರ ಮುಂಜಾನೆ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಚಿರತೆ ಮೇಲುತ್ತುವ ಕಾಯಾ೯ಚರಣೆ ವೀಕ್ಷಿಸಲು ಸ್ಥಳೀಯ ಅಪಾರ ಮಂದಿ ಕುತೂಹಲದಿಂದ ಜಮಾಯಿಸಿದ್ದಾರೆ. ಇಲ್ಲಿನ ದೈಲ, ಅಮ್ಯಾಲು, ಕೈತ್ರೋಡಿ, ಬದನಡಿ ಮತ್ತಿತರ ಪ್ರದೇಶಗಳಲ್ಲಿ ಕಳೆದ ಐದಾರು ವರ್ಷಗಳಲ್ಲಿ ಹಲವಾರು ನಾಯಿ ಮತ್ತು ಜಾನುವಾರುಗಳನ್ನು […]