ನಂತೂರು ಜಂಕ್ಷನ್‌ ರಸ್ತೆಯಲ್ಲಿ ಗುಂಡಿಗಳನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೇ ದುರಸ್ತಿ ಮಾಡುವ ದೃಶ್ಯ

Friday, September 22nd, 2023
Nanthoor-Junction

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಜಂಕ್ಷನ್‌ನಲ್ಲಿ ರಸ್ತೆ ಗುಂಡಿಗಳನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೇ ಕಾಂಕ್ರಿಟ್ ಹಾಕಿ ಮುಚ್ಚಿದ್ದಾರೆ. ರಸ್ತೆ ಗುಂಡಿಗಳಿಂದಾಗಿ ಜಂಕ್ಷನ್ ನಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಅಲ್ಲದೇ ಟ್ರಾಫಿಕ್ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೇ ಹೊಂಡಗಳಿಗೆ ಕಾಂಕ್ರಿಟ್ ಹಾಕಿ ಮುಚ್ಚಿದ್ದು, ಪೊಲೀಸ್ ಸಿಬ್ಬಂದಿಯ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇಲ್ಲಿನ ದುರವಸ್ಥೆಯನ್ನು ಕಂಡು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕೂಳೂರು ಹಳೆ ಕಮಾನು ಸೇತುವೆ ದುರಸ್ತಿ : ಗಂಟೆಗಟ್ಟಲೆ ಪರದಾಡುತ್ತಿರುವ ವಾಹನ ಸವಾರರು

Tuesday, March 17th, 2020
Trafic

ಮಂಗಳೂರು : ಕೂಳೂರು ಹಳೆ ಕಮಾನು ಸೇತುವೆಯ ದುರಸ್ತಿಯ ಹಿನ್ನೆಲೆಯಲ್ಲಿ ಮಾಡಿರುವ ಸಂಚಾರ ಬದಲಾವಣೆಯಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಸಮಸ್ಯೆ ಉಂಟಾಗಿದೆ. ಮಂಗಳವಾರ ಬೆಳಗ್ಗೆಯಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಸಮಸ್ಯೆ ತೀವ್ರವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಕೂಳೂರು ಹೊಸ ಸೇತುವೆಯಲ್ಲೇ ವಾಹನಗಳ ದ್ವಿಮುಖ ಸಂಚಾರ (ಒಂದೇ ರಸ್ತೆಯಲ್ಲಿ ಎದುರು ಬದುರಾಗಿ)ಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ವಾಹನ ದಟ್ಟಣೆಗೆ ಕಾರಣವಾಗಿದೆ. ಇದರಿಂದ ಕೂಳೂರು ಮೇಲ್ಸೇತುವೆ ಸೇರಿದಂತೆ ಈ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಟ್ರಾಫಿಕ್ […]

ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಟಿಪ್ಪರ್ – ಟಾಟಾ ಏಸ್ ನ ನಡುವೆ ಅಪಘಾತ, ಇಬ್ಬರು ಗಂಭೀರ

Saturday, March 16th, 2013
Accsident near Jalady

ಕುಂದಾಪುರ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರಕು ತುಂಬಿದ ಟಿಪ್ಪರ್ ಹಾಗೂ ಟಾಟಾ ಏಸ್ ಪರಸ್ಪರ ಢಿಕ್ಕಿಯಾದ ಪರಿಣಾಮ ಟಾಟಾ ಏಸ್ ನ ವಾಹನ ಚಾಲಕ ಯಶವಂತಪುರ ಪೀಣ್ಯದ ಬಶೀರ್ ಹಾಗೂ  ಟಿ. ನರಸೀಪುರ ಮೂಲದ ಸಿದ್ಧ ಎಂಬುವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಬೆಂಗಳೂರಿನ ವೊಡಾಫೋನ್ ಕಂಪೆನಿಯ ಶ್ರೀ ವಿಘ್ನೇಶ್ವರ ಲಾಜಿಸ್ಟಿಕ್‌ಗೆ ಸೇರಿದ ಟಾಟಾ ಏಸ್ ವಾಹನವು ಬೆಂಗಳೂರಿನಿಂದ ವೊಢಾಫೋನ್ ಟವರ್‌ಗೆ ಸಂಬಂಧಿಸಿದ ಸಲಕರಣೆಗಳನ್ನು ಗೋಕರ್ಣದಲ್ಲಿ ಇಳಿಸಿ ವಾಪಾಸ್ಸಾಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ […]